ಬಾವಾ ಹಾಜಿ ಅರಳ
ಮಂಗಳೂರು, ಜ.21: ಬಂಟ್ವಾಳ ತಾಲೂಕಿನ ಅರಳ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಾವಾ ಹಾಜಿ ಅರಳ (79) ಇಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೂಲತಃ ಬಂಟ್ವಾಳದ ಅರಳ ಸೂರಲ್ಪಾಡಿಯ ನಿವಾಸಿಯಾಗಿದ್ದ ಅವರು ಬಳಿಕ ತಮ್ಮ ನಿವಾಸವನ್ನು ಸೂರಲ್ಪಾಡಿಗೆ ವರ್ಗಾಯಿಸಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಕಳೆದ ಕೆಲವು ಸಮಯದಿಂದ ಅಸೌಖ್ಯದಲ್ಲಿದ್ದರು. ಅಸೌಖ್ಯದಿಂದಾಗಿ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೆ ಇಂದು ಬೆಳಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಕೃಷ್ಣಾಪುರ ಏಳನೆ ಬ್ಲಾಕ್‌ನ ಜುಮಾ ಮಸೀದಿಯಲ್ಲಿ ಅಸರ್ ನಮಾಝ್‌ನ ಬಳಿಕ ಮೃತರ ಅಂತ್ಯ ಕ್ರಿಯೆ ನೆರವೇರಿಸಲಾಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
Next Story





