ಮೊಬೈಲ್, ನಗದು ಕಸಿದು ಪರಾರಿ
ಮಂಗಳೂರು, ಜ.21: ಅಪರಿಚಿತ ಇಬ್ಬರು ಯುವಕರು ವ್ಯಕ್ತಿಯೊಬ್ಬನ ಬಳಿಯಿಂದ ಎರಡು ಮೊಬೈಲ್ ೆನ್ ಹಾಗೂ 2,500 ರೂ. ನಗದು ಕಸಿದು ಪರಾರಿಯಾಗಿರುವ ಘಟನೆ ಇಂದು ಕಂಕನಾಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಂಡಕೇರಿಯ ನಿವಾಸಿ ವಿಶ್ವನಾಥ ಎಂಬವರು ಕೆಲಸ ಮುಗಿಸಿ ಯೆಯ್ಯಡಿಯಿಂದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಇವರನ್ನು ನಿಲ್ಲಿಸಿ ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಅಪರಿಚಿತ ವಿಶ್ವನಾಥರ ಮುಖವನ್ನು ಟವಲ್‌ನಿಂದ ಕಟ್ಟಿ ಇನ್ನೋರ್ವ ಅವರ ಬಳಿಯಿದ್ದ ಎರಡು ಮೊಬೈಲ್ ೆನ್ ಹಾಗೂ 2,500 ರೂ. ಸಹಿತ ಒಟ್ಟು 12,400 ರೂ. ವೌಲ್ಯದ ಸೊತ್ತನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story





