ಯುವತಿ ನಾಪತ್ತೆ
ಉಡುಪಿ, ಜ.21: ಉಡುಪಿ ಜಿಲ್ಲೆಯ ಬೊಮ್ಮರಬೆಟ್ಟು ಗ್ರಾಮದ ಹಿರಿಯಡಕ ಪಾಪುಜೆ ದಿ.ಶೀನ ಪೂಜಾರಿಯವರ ಪುತ್ರಿ ರೇವತಿ (35) ಎಂಬವರು ಜ.16ರಂದು ತಮ್ಮ ಮನೆಯಿಂದ ಮಣಿಪಾಲ ಕ್ಕೆ ಕೆಲಸಕ್ಕೆಂದು ತೆರಳಿದವರು ಇದುವರೆಗೆ ಮನೆಗೆ ವಾಪಸಾಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ 5.1 ಅಡಿ ಎತ್ತರ, ದೃಢಕಾಯ ಶರೀರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ, ಚೂಡಿದಾರ ಧರಿಸಿದ್ದು, ಬಲರಟ್ಟೆಯ ಮೇಲೆ ಕಪ್ಪುಬಣ್ಣದ ದೊಡ್ಡ ಮಚ್ಚೆ ಹೊಂದಿದ್ದಾರೆ. ತುಳು ಹಾಗೂ ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿ ಸಂಖ್ಯೆ: 0820-2534777, 2526444 ಅಥವಾ ಬ್ರಹ್ಮಾವರ ವೃತ್ತ ಕಚೇರಿ:0820-2562966 ಅಥವಾ ಹಿರಿಯಡಕ ಪೊಲೀಸ್ ಠಾಣೆ: 0820-2542248ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





