ಇಂದಿನಿಂದ ಅತ್ತೂರು ಬಸಿಲಿಕಾದಲ್ಲಿ ಜಾತ್ರೆ ಮಹೋತ್ಸವ
ಕಾರ್ಕಳ, ಜ.21: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಚರ್ಚ್ ವಾರ್ಷಿಕ ಜಾತ್ರಾ ಮಹೋತ್ಸವವು ಜ.22ರಿಂದ 26ರವರೆಗೆ ನಡೆಯಲಿದೆ. ಜ.22ರಂದು ಬೆಳಗ್ಗೆ 7:30ಕ್ಕೆ ದಿವ್ಯ ಬಲಿಪೂಜೆ, ಪರಮ ಪ್ರಸಾದದ ಮೆರವಣಿಗೆ, ಸಂಜೆ 3 ಮತ್ತು 5ಕ್ಕೆ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ, ಜ.23ರಂದು ಬೆಳಗ್ಗೆ 10 ಮತ್ತು ಸಂಜೆ 3ಕ್ಕೆ ವ್ಯಾಷ್ಟರಿಗಾಗಿ ವಿಶೇಷ ಪ್ರಾರ್ಥನೆಗಳು, ಸಂಜೆ 6ಕ್ಕೆ ಬಳ್ಳಾರಿ ಧರ್ಮಾಧ್ಯಕ್ಷರಿಂದ ಕನ್ನಡದಲ್ಲಿ ದಿವ್ಯ ಬಲಿಪೂಜೆ, ಜ.24ರಂದು ಸಂಜೆ 6ಕ್ಕೆ ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರಿಂದ ಕನ್ನಡದಲ್ಲಿ ದಿವ್ಯ ಬಲಿಪೂಜೆ, ಜ.25ರಂದು ಬೆಳಗ್ಗೆ 8ಕ್ಕೆ ಬೆಳ್ತಂಗಡಿಯ ಧರ್ಮಾಧ್ಯಕ್ಷರಿಂದ ಕನ್ನಡದಲ್ಲಿ ದಿವ್ಯ ಬಲಿಪೂಜೆ (ಮಲಬಾರ್), ಬೆಳಗ್ಗೆ 10:30ಕ್ಕೆ ಮಂಗಳೂರಿನ ಧರ್ಮಾಧ್ಯಕ್ಷರಿಂದ ಕೊಂಕಣಿಯಲ್ಲಿ ಹಬ್ಬದ ಬಲಿಪೂಜೆ, ಜ.26ರಂದು ಮಾರ್ಗದರ್ಶಿ ಮಾತೆಯ ಹಬ್ಬ, ಬೆಳಗ್ಗೆ 10ಕ್ಕೆ ಉಡುಪಿ ಧರ್ಮಾಧ್ಯಕ್ಷರಿಂದ ಕೊಂಕಣಿಯಲ್ಲಿ ಹಬ್ಬದ ಬಲಿಪೂಜೆ ನೆರವೇರಲಿದೆ.
Next Story





