ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಮೂಡುಬಿದಿರೆ, ಜ.21: ವರ್ಧಮಾನ ಸಾಹಿತ್ಯ ಪ್ರಶಸ್ತಿ ಪೀಠವು ಈ ಬಾರಿಯ ಪ್ರಶಸ್ತಿಗಾಗಿ 2011ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕನ್ನಡ ಸಾಹಿತ್ಯದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳನ್ನು ಪರಿಶೀಲನೆಗಾಗಿ ಆಹ್ವಾನಿಸಿದೆ. ಪ್ರಶಸ್ತಿಯು ಗೌರವ ಸಂಭಾವನೆ, ಪ್ರಶಸ್ತಿಪತ್ರ ಸನ್ಮಾನವನ್ನು ಒಳಗೊಂಡಿರುತ್ತದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಿರಿಯ ಸಾಹಿತಿಗಳ ಕೃತಿಗೆ ಮೀಸಲಾಗಿದ್ದರೆ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಮೊದಲನೆ, ಎರಡನೆ ಅಥವಾ ಮೂರನೆಯ ಕೃತಿಯ ಮೂಲಕ ಮಹತ್ವದ್ದನ್ನು ಸಾಧಿಸಿದ ಹೊಸ ಪೀಳಿಗೆಯ ಸಾಹಿತಿಗಳಿಗೆ ನೀಡಲಾಗುತ್ತಿದೆ. ಆಸಕ್ತರು ಕೃತಿಯ ಮೂರು ಪ್ರತಿಗಳನ್ನು ಫೆ.28ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮುನಿರಾಜ ರೆಂಜಾಳ, ಸಹ ನಿರ್ದೇಶಕರು, ವರ್ಧಮಾನ ಸಾಹಿತ್ಯ ಪ್ರಶಸ್ತಿ ಪೀಠ, ಜೈನ ಹೈಸ್ಕೂಲ್ ಮೂಡುಬಿದಿರೆ ದ.ಕ 574227. ಮೊ.: 9449936232 ಅನ್ನು ಸಂಪರ್ಕಿಸುವಂತೆ ಪ್ರಶಸ್ತಿ ಪೀಠದ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





