ಇಂದು ಕೈಕಂಬದಲ್ಲಿ ಸನದುದಾನ ಸಮ್ಮೇಳನ
ಗುರುಪುರ, ಜ.21: ಅಸ್ರಾರುದ್ದೀನ್ ಅರೇಬಿಕ್ ಕಾಲೇಜು ಕೈಕಂಬ ಇದರ ಹಿಫ್ಲುಲ್ ಕುರ್‌ಆನ್ ಕಾಲೇಜಿನ ಸನದುದಾನ ಸಮ್ಮೇಳನವು ಜ.22ರಂದು ಮಗ್ರಿಬ್ ನಮಾಝ್‌ನ ಬಳಿಕ ಅಸ್ರಾರುದ್ದೀನ್ ಅರೇಬಿಕ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ದಿಲ್ಲಿಯ ಡಾ.ಸೈಯದ್ ಫಝಲುಲ್ಲಾಹ್ ಮಹಾರಾಷ್ಟ್ರದ ಜಾಮಿಯಾ ಅಹ್ಮದ್ ರಝಾ ಕಾಲೇಜಿನ ಪ್ರಾಂಶುಪಾಲ ಮುಫ್ತಿ ಮುಹಮ್ಮದ್ ಇಬ್ರಾಹೀಂ ಮಖ್ಬೂಲಿ, ಕಾರಾವಾರ ಖಾಝಿ ಮುಫ್ತಿ ಮುಹಮ್ಮದ್ ಇಶ್ತಿಮಾಕ್ ಅಹ್ಮದ್, ಅಲ್ಲಾಮ ಮುಹಮ್ಮದ್ ರಫೀಕ್ ಅಹ್ಮದ್ ನೂರಿ ಮತ್ತಿತರರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





