Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಾಡುವ ಕಲಕುವ ಬ್ಯೂಟಿಫುಲ್ ಮನಸುಗಳು

ಕಾಡುವ ಕಲಕುವ ಬ್ಯೂಟಿಫುಲ್ ಮನಸುಗಳು

-ಚಂದ್ರಶೇಖರ್ ಐಜೂರು-ಚಂದ್ರಶೇಖರ್ ಐಜೂರು22 Jan 2017 12:09 AM IST
share

ವಿಕೃತಗೊಂಡಿರುವ ಕನ್ನಡದ ಟಿವಿ ಲೋಕ ಮತ್ತು ಪೊಲೀಸ್ ಇಲಾಖೆಗಳು ತಮ್ಮ ಕಣ್ಣು ಕಿವಿ ಕಳೆದುಕೊಂಡಿರುವ ಈ ಹೊತ್ತಲ್ಲಿ ಮತ್ತವೇ ವಿಕೃತ ಕನ್ನಡ ಸಿನೆಮಾಗಳನ್ನು ನೋಡುತ್ತಾ ನೋಡುತ್ತಾ ಕನ್ನಡ ಸಿನಿಪ್ರೇಕ್ಷಕನು ವಿಕೃತಗೊಂಡಿರುವ ಇದೇ ಹೊತ್ತಲ್ಲಿ ಜಯತೀರ್ಥರ ‘ಬ್ಯೂಟಿಫುಲ್ ಮನಸುಗಳು’ ತೆರೆಕಂಡಿದೆ. ಕೆಲವರ್ಷಗಳ ಹಿಂದೆ ಜಡ್ಡುಗಟ್ಟಿದ ಕನ್ನಡ ಸಿನೆಮಾಗಳ ಒಳಹೊರಗನ್ನು ಅವಲೋಕಿಸುತ್ತಾ ಕಟುವಾದ ಮಾತುಗಳಲ್ಲಿ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಆ ಲೇಖನ ಓದಿದ ಇದೇ ಜಯತೀರ್ಥ ‘ಇಷ್ಟರಲ್ಲೇ ‘ಒಲವೇ ಮಂದಾರ’ ಅನ್ನುವ ಸಿನೆಮಾ ಬರ್ತಿದೆ, ಸಿನೆಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ಸಂದೇಶ ಕಳಿಸಿದ್ದರು.
ಚಿತ್ರದ ಮೊದಲರ್ಧ ಗಂಟೆಯ ಟೇಕಾಫ್ ಕೃತಕ ಅನ್ನಿಸಿದರೂ ‘ಒಲವೇ ಮಂದಾರ’ ತನ್ನ ಕತೆ, ಉಪಕತೆಗಳಿಂದಾಗಿ ಬಹುದೊಡ್ಡ ಕ್ಯಾನ್ವಾಸ್’ನಲ್ಲಿ ಮೂಡಿದ ದೃಶ್ಯಕಾವ್ಯದಂತಿತ್ತು. ಚಿತ್ರದ ಸಂಗೀತ ಮತ್ತು ಫೋಟೋಗ್ರಫಿ ‘ಒಲವೇ ಮಂದಾರ’ದ ನೈಜ ಚಿತ್ತಾರದ ಅಂದವನ್ನು ಚೆಂದಗೊಳಿಸಿದ್ದವು. ಜಯತೀರ್ಥ ತಮ್ಮ ಮೊದಲ ಚಿತ್ರದಲ್ಲೇ ತಮ್ಮ ಸಿಗ್ನೇಚರ್ ಛಾಪು ಮೂಡಿಸಿದ್ದರು.
ಇದಾದ ನಂತರ ಬಂದ ಟೋನಿ, ಬುಲೆಟ್ ಬಸ್ಯಾ (ಈ ಎರಡೂ ಚಿತ್ರಗಳನ್ನು ನಾನು ನೋಡಿಲ್ಲ)ದ ನಂತರ ಜಯತೀರ್ಥ ತಮ್ಮ ಚಿತ್ರರೂಪಿಸುವ ಚಿಂತನಾ ಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿರುವ ಕುರುಹುಗಳನ್ನು ‘ಬ್ಯೂಟಿಫುಲ್ ಮನಸುಗಳ’ಲ್ಲಿ ದಂಡಿಯಾಗಿ ಕಾಣಬಹುದು. ‘ಒಲವೇ ಮಂದಾರ’ದ ಜಯತೀರ್ಥರಲ್ಲಿದ್ದ ಮುಗ್ಧತೆ ಕಾಣೆಯಾಗಿ ಅಲ್ಲೊಬ್ಬ ಫಿಲೋಸಫರ್ ಬಂದು ಕೂತಿರುವಂತಿದೆ. ಈಗ ಈ ಫಿಲಾಸಫರ್‌ಗೆ ಅವಸರ ಮತ್ತು ಸಾವಧಾನ ಎರಡು ಬೆನ್ನುಬಿದ್ದ ಪರಿಣಾಮ ‘ಬ್ಯೂಟಿಫುಲ್ ಮನಸುಗಳು’ ಹುಟ್ಟಿಕೊಂಡಂತೆ ಕಾಣುತ್ತಿದೆ.
ಇರಲಿ, ಕನ್ನಡ ಚಿತ್ರರಂಗ ದಿಕ್ಕಾಪಾಲಾಗಿ ದಿಕ್ಕೆಟ್ಟು ಓಡುತ್ತಿರುವ ಈ ಹೊತ್ತಲ್ಲಿ ಜಯತೀರ್ಥರ ‘ಬ್ಯೂಟಿಫುಲ್ ಮನಸುಗಳು’ ನಮ್ಮನ್ನು ಕೆಲಕಾಲ ಕಾಡದೆ, ಕಲಕದೆ ಬಿಡದು. ಮುಖ್ಯವಾಗಿ ‘ಲೂಸಿಯಾ’ ಚಿತ್ರದಲ್ಲಿ ಪೈಪೋಟಿಗಿಳಿದಂತೆ ನಟಿಸಿದ್ದ ನೀನಾಸಂ ಸತೀಶ್ ಮತ್ತು ಶೃತಿ ಹರಿಹರನ್ ಇಲ್ಲೂ ‘ಬ್ಯೂಟಿಫುಲ್ ಮನಸುಗಳ’ಲ್ಲೂ ಅದರ ಮುಂದುವರಿದ ಅಧ್ಯಾಯದಂತೆ ಮೈದುಂಬಿ ನಟಿಸಿದ್ದಾರೆ.
‘ದೊಡ್ಮನೆ ಹುಡ್ಗ’ದಂತಹ ಕಳಪೆದರ್ಜೆಯ ಚಿತ್ರವನ್ನು ಗೆಲ್ಲಿಸಿಬಿಡುವ ಕನ್ನಡದ ಪ್ರೇಕ್ಷಕ ‘ಬ್ಯೂಟಿಫುಲ್ ಮನಸುಗಳಿ’ಗೆ ಬೆನ್ನು ತೋರಿದ್ದೆಯಾದರೆ ಇದು ಕನ್ನಡ ಚಿತ್ರರಂಗ ತಲುಪಿರುವ ವಿಕೃತತೆಯ ರಸಾತಳ ಅನ್ನಬಹುದು. ಹಾಗಾಗದಿರಲಿ. ‘ಬ್ಯೂಟಿಫುಲ್ ಮನಸುಗಳು’ ಗೆಲ್ಲಲಿ; ದುಡ್ಡು ಮಾಡಲಿ.
‘ಬ್ಯೂಟಿಫುಲ್ ಮನಸುಗಳ’ನ್ನು ಇವತ್ತು ಪಂಚೇಂದ್ರಿಯ ಕಳೆದುಕೊಂಡಿರುವ ಕನ್ನಡದ ಎಲ್ಲಾ ಮಾಧ್ಯಮಗಳು ಮತ್ತು ಅವರೊಟ್ಟಿಗೆ ಪೊಲೀಸರು ನೋಡುವಂತಾಗಲಿ. ಜಯತೀರ್ಥರ ‘?..ಮನಸುಗಳು’ ನೋಡಿದ ನಂತರವಾದರೂ ಕನ್ನಡದ ನೀಚ ಮಾಧ್ಯಮ ಮತ್ತು ಪರಮನೀಚ ಪೊಲೀಸರ ಎದೆಗಳಲ್ಲಿ ಮನುಷ್ಯ ಸಹಜ ಅಂತಃಕರಣ ಸದ್ದುಮಾಡಲಿ.
 

share
-ಚಂದ್ರಶೇಖರ್ ಐಜೂರು
-ಚಂದ್ರಶೇಖರ್ ಐಜೂರು
Next Story
X