Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಕಾವೇರಿದ...

ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಕಾವೇರಿದ ಪ್ರತಿಭಟನೆ

ವಾಶಿಂಗ್ಟನ್‌ನಲ್ಲಿ ಬೃಹತ್ ಮಹಿಳಾ ರ್ಯಾಲಿ

ವಾರ್ತಾಭಾರತಿವಾರ್ತಾಭಾರತಿ22 Jan 2017 8:13 PM IST
share
ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಕಾವೇರಿದ ಪ್ರತಿಭಟನೆ

ವಾಶಿಂಗ್ಟನ್,ಜ.22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಭಜನವಾದಿ ನೀತಿಗಳು ಹಾಗೂ ಮಹಿಳಾ ವಿರೋಧಿ ನಿಲುವುಗಳನ್ನು ಖಂಡಿಸಿ ಅಮೆರಿಕಾದ್ಯಂತ ಶನಿವಾರ ಲಕ್ಷಾಂತರ ಮಂದಿ ಅಮೆರಿಕನ್ನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ವಾಶಿಂಗ್ಟನ್‌ನಲ್ಲಿ ಟ್ರಂಪ್ ವಿರುದ್ಧ ನಡೆದ ಮಹಿಳಾ ಪ್ರತಿಭಟನಾ ರ್ಯಾಲಿ ಸಮಾರೋಪಗೊಂಡ ಬಳಿಕ ಸಂಘಟಕರು ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ ಪ್ರತಿಕೂಲ ಸನ್ನಿವೇಶದ ನಡುವೆಯೂ ಮಾನವಹಕ್ಕುಗಳನ್ನು ರಕ್ಷಿಸುವ, ಸಮರ್ಥಿಸುವ ಹಾಗೂ ಅವನ್ನು ಮುನ್ನಡೆಸುವ ಚಳವಳಿಯ ಆರಂಭ ಇದಾಗಿದೆ ’’ ಎಂದು ಘೋಷಿಸಿದರು.

ವಾಶಿಂಗ್ಟನ್ ರ್ಯಾಲಿಯಲ್ಲಿ, ಅಮೆರಿಕ ಕಾಂಗ್ರೆಸ್‌ಗೆ ಚುನಾಯಿತರಾಗಿರುವ ಐವರು ಭಾರತೀಯ ಮೂಲದ ಅಮೆರಿಕನ್ ಸಂಸದರೂ ಪಾಲ್ಗೊಂಡರು. ರ್ಯಾಲಿಯಲ್ಲಿ ಪಾಲ್ಗೊಂಡವರ ಸಂಖ್ಯೆ 5 ಲಕ್ಷವನ್ನೂ ದಾಟಿತ್ತೆಂದು ಸಂಘಟಕರು ತಿಳಿಸಿದ್ದಾರೆ. ಇದೇ ವೇಳೆ ಲಾಸ್‌ಏಂಜಲೀಸ್‌ನಲ್ಲಿ ನಡೆದ ಟ್ರಂಪ್ ವಿರೋಧಿ ಪ್ರತಿಭಟನೆಯಲ್ಲಿ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿದ್ದರೆಂದು ವರದಿಯಾಗಿದೆ.

ವಾಶಿಂಗ್ಟನ್‌ನಲ್ಲಿ ಪೆನ್ಸಿಲ್ವೇನಿಯಾ ಮೈದಾನದಲ್ಲಿ ಮುಂಜಾನೆಯಿಂದಲೇ ಜಮಾಯಿಸತೊಡಗಿದ ಪ್ರತಿಭಟನಕಾರರು, ಸಂಜೆಯ ವೇಳೆಗೆ ಶ್ವೇತಭವನದೆಡೆಗೆ ರ್ಯಾಲಿ ನಡೆಸಿದರು.

ಖ್ಯಾತ ಚಿತ್ರ ನಿರ್ದೇಶಕ ಮೈಕೆಲ್ ಮೂರ್, ಸ್ತ್ರೀವಾದಿ ನಾಯಕಿ ಗ್ಲೋರಿಯಾ ಸ್ಟೈನೆಮ್, ಸಂಗೀತ ನಿರ್ದೇಶಕಿ ಅಲಿಸಿಯಾ ಕೀಸ್ ಮತ್ತಿತರರು ಮಾತನಾಡಿ, ವಲಸಿಗರ ವಿರುದ್ಧ ಟ್ರಂಪ್ ಅವರ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ಖ್ಯಾತ ಪಾಪ್‌ಗಾಯಕಿ ಮಡೋನ್ನಾ ಕೂಡಾ ವೇದಿಕೆಗೆ ಆಗಮಿಸಿದ ರ್ಯಾಲಿಗೆ ತನ್ನ ಬೆಂಬಲ ವ್ಯಕ್ತಪಡಿಸಿದರು.

‘‘ ನಮ್ಮ ಬಡಿದೆಬ್ಬಿಸಲು ಈ ಭಯಾನಕ ಕ್ಷಣವೇ ಬೇಕಾಯಿತು ಎಂದು ಟ್ರಂಪ್ ಆಡಳಿತದ ಆರಂಭವನ್ನು ಪ್ರಸ್ತಾಪಿಸಿದ ಮಡೋನ್ನಾ, ಅಂತ್ಯದಲ್ಲಿ ನ್ಯಾಯ ದೊರೆಯಲಿದೆ ಹಾಗೂ ಒಳ್ಳೆಯದಕ್ಕೆ ಗೆಲುವು ಲಭಿಸಲಿದೆ ಎಂಬ ಹುಸಿಭ್ರಮೆಯಲ್ಲಿ ನಾವಿದ್ದೇವೆ. ಆದರೆ ಹೋರಾಡದೆ ಹಾಗಾಗದು ಸಾಧ್ಯವಿಲ್ಲವೆಂದು ಮಡೋನ್ನಾ ಘೋಷಿಸಿದರು.

ನ್ಯೂಯಾರ್ಕ್ ನಗರದಲ್ಲಿ 10 ಸಾವಿರಕ್ಕೂ ಅಧಿಕ ಪ್ರತಿಭಟನಕಾರರು, ಅಮೆರಿಕ ಅಧ್ಯಕ್ಷರ ಖಾಸಗಿ ನಿವಾಸವಾದ ಟ್ರಂಪ್ ಟವರ್ ಕಟ್ಟಡೆದೆಡೆಗೆ ರ್ಯಾಲಿ ನಡೆಸಿದರಾದರೂ, ಅವರನ್ನು ದಾರಿ ಮಧ್ಯೆ ಪೊಲೀಸರು ತಡೆದರು.

ಚಿಕಾಗೋದಲ್ಲಿ ನಡೆದ ಟ್ರಂಪ್ ವಿರೋಧಿ ರ್ಯಾಲಿಯಲ್ಲಿ 1.50 ಲಕ್ಷ ಜನರು ಭಾಗವಹಿಸಿದ್ದರು. ಬಾಸ್ಟನ್ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾಸಭೆಯನ್ನುದ್ದೇಶಿಸಿ ಸೆನೆಟರ್ ಎಲಿಝಬೆತ್ ವಾರನ್ ಭಾಷಣ ಮಾಡಿದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದ ಡೆಮಾಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಕೂಡಾ ವಾಶಿಂಗ್ಟನ್ ರ್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ನಮ್ಮ ಪಾಲಿಗೆ ಟ್ರಂಪ್ ಆಡಳಿತವು ಅಳಿವು ಉಳಿವಿನ ಹೋರಾಟವಾಗಿದೆ. ನಮ್ಮ ಮಾನವಹಕ್ಕುಗಳ ವಿರುದ್ಧ ನಡೆಯುವ ಪ್ರಹಾರದ ವಿರುದ್ಧ ನಾವು ಹೋರಾಡಬೇಕಿದೆ.


ಮೋನಿಕಾ
ಮಹಿಳಾ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ ಸಾಕ್ಷಚಿತ್ರ ನಿರ್ದೇಶಕಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X