ರಈಸ್ v/s ಕಾಬಿಲ್ ನಲ್ಲಿ ಯಾವುದನ್ನು ನೋಡಬೇಕು ಎಂದು ಆದೇಶಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ !

ಮುಂಬೈ, ಜ.22: ‘ಅಬ್ ಬರೀ ದೇಶ್ ಕಿ ಕಾಬಿಲ್ ಜನ್ತಾ ಕಿಹೈ, ಜೊ ಕಾಬಿಲ್ ಹೈ ಉಸ್ಕಾ ಹಕ್ ಕೋಯಿ ಬೇಇಮಾನ್ ರಯೀಸ್ ನ ಚೀನ್ ಪಾಯೆ...’
ಈಗ ದೇಶದ ಅರ್ಹ(ಕಾಬಿಲ್) ಜನರಿಗೊಂದು ಅವಕಾಶವಿದೆ. ಅರ್ಹರಿಗೆ ಸೇರಬೇಕಾದ್ದನ್ನು ಭ್ರಷ್ಟ ಶ್ರೀಮಂತರು (ರಯೀಸ್) ಕಿತ್ತುಕೊಳ್ಳದಿರಲಿ- ಹೀಗೆಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯ ಅವರು ವಿವಾದಕ್ಕೆ ಕಾರಣವಾಗಿದ್ದಾರೆ.
ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಸಿನೆಮಾ ‘ರಯೀಸ್’ ಬಿಡುಗಡೆಗೆ ಕೇವಲ ನಾಲ್ಕು ದಿನ ಇರುವಂತೆಯೇ ಕೈಲಾಶ್ ಅವರು ರಯೀಸ್ ಸಿನೆಮಾವನ್ನು ಕಾಳಧನಿಕರಿಗೆ ಹೋಲಿಸಿ, ಕಾಬಿಲ್ ಸಿನೆಮಾವನ್ನು ದೇಶಭಕ್ತರಿಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.
ಶಾರುಖ್ ಖಾನ್ ಅವರ ‘ರಯೀಸ್’ ಮತ್ತು ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಎರಡೂ ಚಿತ್ರಗಳು ಜನವರಿ 25ರಂದೇ ಬಿಡುಗಡೆಗೊಳ್ಳಲಿವೆ.
ದೇಶಕ್ಕೆ ಸೇರಿರದ ವಿಷಯವೊಂದು ಯಾವ ಪುರುಷಾರ್ಥಕ್ಕೆ? ಆದ್ದರಿಂದ ನಾವೆಲ್ಲರೂ ದೇಶಭಕ್ತ ‘ಕಾಬಿಲ್’ ಪರ ನಿಲ್ಲೋಣ ಎಂದು ಕೈಲಾಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
जो #Raees देश का नहीं, वो किसी काम का नहीं।
— Kailash Vijayvargiya (@KailashOnline) January 21, 2017
और एक #Kaabil देशभक्त का साथ, तो हम सभी को देना ही चाहिए। pic.twitter.com/S5ufpuQTPJ







