ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಅಧ್ಯಕ್ಷರಾಗಿ ಸಿರಾಜುದ್ದೀನ್ ಸಖಾಫಿ ಆಯ್ಕೆ

ಕೊಣಾಜೆ , ಜ.22 : ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವಾರ್ಷಿಕ ಕೌನ್ಸಿಲ್ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರ್‌ರವರ ಅಧ್ಯಕ್ಷತೆಯಲ್ಲಿ ರಾಜ್ಯ ನಾಯಕ ಸಿ.ಟಿ.ಎಂ ಮನ್ಶರ್ ತಂಙಳ್‌ರವರ ದುಆದೊಂದಿಗೆ ದಾರುಲ್ ಇಝ್ಝಿ ಕೌಡೇಲ್ ಬಿ.ಸಿ.ರೋಡಿನಲ್ಲಿ ಇತ್ತೀಚೆಗೆ ನಡೆಯಿತು.
ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧೀಕ್ ಸಖಾಫಿ ಮೂಳೂರು ಉಧ್ಘಾಟಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀಕ್ಷಕರಾಗಿ ಆಗಮಿಸಿದ ಶರೀಫ್ ಮಾಸ್ಟರ್ ಬೆಂಗಳೂರು ತರಗತಿಯನ್ನು ಮಂಡಿಸಿದರು.
ಕಾರ್ಯದರ್ಶಿ ಶಮೀರ್ ಸುಳ್ಯ ವರದಿಯನ್ನು ವಾಚಿಸಿದರು.
ಕೋಶಾಧಿಕಾರಿ ಅಲ್ತಾಫ್ ಕುಂಪಲ ಲೆಕ್ಕಪತ್ರವನ್ನು ಮಂಡಿಸಿದರು.
ವರದಿ ಹಾಗೂ ಲೆಕ್ಕಪತ್ರದ ಅನುಮೋದನೆಯ ನಂತರ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿರಾಜುದ್ಧೀನ್ ಸಖಾಫಿ ಕನ್ಯಾನ, ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮೊಡಂತ್ಯಾರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಉಪಾಧ್ಯಕ್ಷರುಗಳಾಗಿ ಶರೀಫ್ ಸಅದಿ ಕಿಲ್ಲೂರು, ಇಬ್ರಾಹಿಂ ಸಖಾಫಿ ಸೆರ್ಕಳ, ಕೆ.ಎಂ.ಹೆಚ್ ಝುಹ್ರಿ , ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ನಂದಾವರ, ಮಹಮ್ಮದ್ ಅಲಿ ತುರ್ಕಳಿಕೆ ಹಾಗೂ ಇತರ 15 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಿರಾಜುದ್ಧೀನ್ ಸಖಾಫಿ ಸ್ವಾಗತಿಸಿದರು , ಕಲಂದರ್ ಪದ್ಮುಂಜ ವಂದಿಸಿದರು.







