ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪದಾಧಿಕಾರಿಗಳ ಆಯ್ಕೆ

ಸುಳ್ಯ, ಜ.23: ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯನ್ನು ಗಾಂಧಿ ನಗರ ಖತೀಬ್ ಅಲ್ಹಾಜ್ ಅಶ್ರಫ್ ಸಖಾಫಿ ಅಲ್ ಖಾಮಿಲ್ ಉದ್ಘಾಟಿಸಿದರು. ಕಾರ್ಯದರ್ಶಿ ಅಹ್ಮದ್ ಕಬೀರ್ ಜೆಟ್ಟಿಪಳ್ಳ ವರದಿ ವಾಚಿಸಿದರು. ಕೋಶಾಧಿಕಾರಿ ಶಂಸುದ್ದೀನ್ ಪಲ್ಲಮಜಲು ಲೆಕ್ಕ ಪತ್ರ ಮಂಡಿಸಿದರು.
ಚುನಾವಣಾಧಿಕಾರಿಯಾಗಿ ಉಪಸ್ಥಿತರಿದ್ದ ಸಲೀಂ ಹಾಜಿ ಬೈರಿಕಟ್ಟೆ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಖಲೀಲ್ ಝುಹ್ರಿ ಪಂಜ, ಅಹ್ಮದ್ ಕಬೀರ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಜಿ.ಕೆ.ಇಬ್ರಾಹೀಂ ಅಮ್ಜದಿ ಮಂಡೆಕೋಲು, ಕಾರ್ಯದರ್ಶಿಗಳು ಸಿದ್ದೀಕ್ ಎಲಿಮಲೆ, ಅಬ್ಬಾಸ್ ಎ.ಬಿ. ಇರುವಂಬಳ್ಳ, ಕೋಶಾಧಿಕಾರಿ ಅಬ್ದುಲ್ ರಝಾಕ್ ಅಲೆಕ್ಕಾಡಿ, ಕ್ಯಾಂಪಸ್ ಕಾರ್ಯದರ್ಶಿ ಜಾಫರ್ ಮಾಸ್ಟರ್, ಸಹ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್ರಿ ಕಲ್ಲುಗುಂಡಿ, ಸದಸ್ಯರಾದ ಹನೀಫ್ ಸಖಾಫಿ ಬೆಳ್ಳಾರೆ, ಅಬ್ದುಲ್ಲ ಫಾಝ್ ಮೇನಾಲ, ಸಮೀರ್ ಮೊಗರ್ಪಣೆ, ಇರ್ಫಾನ್, ಜುನೈದ್ ಸಖಾಫಿ ಎಲಿಮಲೆ, ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ, ನಾಸರ್ ಅಹ್ಸನಿ ಸುಣ್ಣಮೂಲೆ, ಹಸೈನಾರ್ ಗುತಿಗಾರು, ಹಸೈನಾರ್ ನೆಕ್ಕಿಲ, ಶಫೀಕ್ ಕೊಯಂಗಿ ಆಯ್ಕೆಯಾದರು.
ಸಭೆಯಲ್ಲಿ ಎಸ್‌ವೈಎಸ್ ರಾಜ್ಯ ಸಮಿತಿಯ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಸುಳ್ಳಿಯ ಸೆಂಟರ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ, ಗಾಂಧಿನಗರ ಶಾಖೆಯ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಕಟ್ಟೆಕಾರ್ಸ್, ಕೋಶಾಧಿಕಾರಿ ರಫೀಕ್ ಚಾಯ್ಸ್, ಅಬೂಬಕರ್ ಸಖಾಫಿ ವಿಟ್ಲ, ಜಬ್ಬಾರ್ ಸಖಾಫಿ ಅಜ್ಜಾವರ, ಅಬ್ದುಲ್ ಖಾದರ್ ಮುಸ್ಲಿಯಾರ್ ಗಾಂಧಿನಗರ, ಅಬ್ದುರ್ರಹ್ಮಾನ್ ಸಅದಿ ಸುಣ್ಣಮೂಲೆ, ಅಬ್ದುರ್ರಹ್ಮಾನ್ ಮೊಗರ್ಪಣೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು ಸ್ವಾಗತಿಸಿ, ವಂದಿಸಿದರು.







