ಮಂಗಲ ಗೋ ಯಾತ್ರೆಗೆ ಸುಳ್ಯದಲ್ಲಿ ಸ್ವಾಗತ
ಸುಳ್ಯ,ಜ.23: ಹೊಸನಗರದ ರಾಮಚಂದ್ರಪುರ ಮಠದ ವತಿಯಿಂದ ನಡೆಯುವ ಸಪ್ತರಾಜ್ಯದ ಮಂಗಲ ಗೋ ಯಾತ್ರೆಯ ಅಂಗವಾಗಿ ನಡೆಯುತ್ತಿರುವ ಮಂಗಲ ಗೋ ರಥಯಾತ್ರೆ ಸೋಮವಾರ ಸುಳ್ಯ ಪ್ರವೇಶಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.
ಶಾಸ್ತ್ರಿ ವೃತ್ತದ ಬಳಿ ರಥವನ್ನು ಸ್ವಾಗತಿಸಿ, ನಗರದ ಪ್ರಮುಖ ಬೀದಿಯಲ್ಲಿ ವಾಹನ ರ್ಯಾಲಿ ನಡೆಯಿತು. ಬಳಿಕ ಚೆನ್ನಕೇಶವ ದೇವಸ್ಥಾನ ಬಳಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಗೋವು ರಾಷ್ಟ್ರೀಯ ಪ್ರಾಣಿಯಾಗಿ ರಾರಾಜಿಸಬೇಕು. ಗೋವಿನ ಸಂತತಿ ಉಳಿಯಬೇಕು. ಈ ಹಿನ್ನಲೆಯಲ್ಲಿ ಗೋ ಯಾತ್ರೆ ನಡೆಯುತ್ತಿದೆ ಎಂದು ಹೇಳಿದರು.
ಮಂಗಲ ಗೋ ಯಾತ್ರೆ ಸಮಿತಿ ಅಧ್ಯಕ್ಷ ದಾಮೋದರ ಮಂಚಿ, ಸಂಚಾಲಕ ಗೋಪಾಲಕೃಷ್ಣ ಭಟ್ ಪೈಚಾರು, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಹವ್ಯಕ ಮಂಡಲ ಸುಳ್ಯ ವಲಯಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಮುಳ್ಳೇರಿಯಾ ವಲಯಾಧ್ಯಕ್ಷ ಶ್ರೀಕೃಷ್ಣ ಭಟ್, ಯಾತ್ರೆಯ ನೇತೃತ್ವ ವಹಿಸಿದ ಅಶೋಕ್ ಕೆದಿಲ, ಸುಬ್ರಹ್ಮಣ್ಯ ಗಬ್ಬಲಡ್ಕ, ವಿಜಯ ಕೃಷ್ಣ ಪೆರಾಜೆ, ಮುರಳೀಕೃಷ್ಣ ಮಾನಸವನ, ಹರೀಶ್ ಭಟ್ ಉಬರಡ್ಕ, ಈಶ್ವರ ಕುಮಾರ್ ಉಬರಡ್ಕ, ನ.ಪಂ ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಭಜರಂಗ ದಳ ಸಂಚಾಲಕ ರಾಜೇಶ್ ರೈ ಉಬರಡ್ಕ, ಸೋಮನಾಥ ಪೂಜಾರಿ, ಪಿ.ಕೆ ಉಮೇಶ್, ವನಸಿರಿ ಗಣಪಯ್ಯ, ಡಾ.ವಿದ್ಯಾಶಾರದೆ, ವಿದ್ಯಾ ಶಂಕರಿ, ರಾಜರಾಜೇಶ್ವರಿ, ಸಂಧ್ಯಾಕುಮಾರ್ ಉಬರಡ್ಕ, ಕೃಷ್ಣವೇಣಿ, ಶ್ರೀದೇವಿ ನಾಗರಾಜ್, ನಟರಾಜ್ ಶರ್ಮ, ರಾಜೇಶ್ ಭಟ್ ನೆಕ್ಕಿಲ, ವೆಂಕಟೇಶ್ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.







