ಸುಳ್ಯ: ಬೆಂಕಿ ಆಕಸ್ಮಿಕ
ಸುಳ್ಯ,ಜ.23: ಸುಳ್ಯದ ಹಳೆಗೇಟು ಬಳಿಯ ಹೊಸಗದ್ದೆಯಲ್ಲಿರುವ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕದ ಆವರಣದೊಳಗೆ ಆಕಸ್ಮಿಕ ಬೆಂಕಿ ವ್ಯಾಪಿಸಿ, ಸುಮಾರು 3 ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಹಾಗೂ ಅಗ್ನಿಶಾಮಕ ದಳದವರು ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಅವರಣದೊಳಗೆ ಕಾಡು ಪೊದೆಗಳು ಬೆಳೆದಿದ್ದು, ತರಗೆಲೆಗಳು ಒಣಗಿರುವುದರಿಂದ ಹೊರಗಡೆ ರಸ್ತೆಯಲ್ಲಿ ಹೋಗುತ್ತಿದ್ದ ಯಾರೋ ಬೀಡಿ ಅಥವಾ ಸಿಗರೇಟ್ ಎಳೆದು ಬಿಸುಡಿದ್ದರಿಂದ ಬೆಂಕಿ ಹತ್ತಿಕೊಂಡಿರ ಬಹುದೆಂದು ಊಹಿಸಲಾಗಿದೆ. ಬೆಳಿಗ್ಗೆಯಿಂದಲೇ ಹೊಗೆ ಎಳುತ್ತಿದ್ದರೂ, ಸುಮಾರು ಎರಡು ಎಕರೆ ಪ್ರದೇಶಕ್ಕೆ ಬೆಂಕಿ ಹಬ್ಬಿದ ಬಳಿಕ ಜನ ಅಗ್ನಿಶಾಮಕ ದಳಕ್ಕೆ ಮತ್ತು ನಗರಪಂಚಾಯತ್‌ಗೆ ಪೋನ್ ಮಾಡಿ ಹೇಳಿದರು. ತಕ್ಷಣ ಅಗ್ನಿಶಾಮಕ ದಳದವರು ಮತ್ತು ನಗರ ಪಂಚಾಯತ್‌ನವರು ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದರು.
Next Story





