ಮಂಗಲ ಗೋಯಾತ್ರೆ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು,ಜ.23: ಜ.29ರಂದು ಮಂಗಳೂರಿನಲ್ಲಿ ನಡೆಯಲಿರುವ ಸಪ್ತರಾಜ್ಯ ಮಂಗಲ ಗೋಯಾತ್ರೆಯ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮ ಸೋಮವಾರ ಪುತ್ತೂರು ನಗರದಲ್ಲಿ ನಡೆಯಿತು. ಮಂಗಲ ಗೋಯಾತ್ರಾ ಮಹಾಮಂಗಲ ಸಮಿತಿ ಸಂಚಾಲಕ ರಾಜಾರಾಂ ಶೆಟ್ಟಿ ಕೋಲ್ಪೆಗುತ್ತು ಅವರು ದರ್ಬೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಗಲ ಗೋಯಾತ್ರಾ ಮಹಾಮಂಗಲ ತಾಲೂಕು ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿ ಜಯಾನಂದ, ತಾಪಂ ಸದಸ್ಯ ರಾಧಾಕೃಷ್ಣ ಬೋರ್ಕರ್, ಅಕ್ಷತಾ ಅಭಿಯಾನದ ಸಂಚಾಲಕಿ ವಿದ್ಯಾಗೌರಿ, ಪದಾಧಿಕಾರಿಗಳಾದ ರಾಜೇಶ್ ಬನ್ನೂರು. ಈಶ್ವರಿ ಆರ್, ನಿತೇಶ್ ಕುಮಾರ್, ನವೀನ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
Next Story





