ಜ.27: ಡ್ರಗ್ಸ್ ವಿರೋಧಿ ಮರಳು ಕಲಾಕೃತಿ ರಚನೆ

ಮಂಗಳೂರು,ಜ.23: ಮಂಗಳಗಂಗೋತ್ರಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ (ಮಾಮ್), ಭಾರತೀಯ ರೆಡ್‌ಕ್ರಾಸ್ ಮತ್ತು ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಮರಳು ಕಲಾಕೃತಿ ರಚನಾ ಕಾರ್ಯಕ್ರಮ ಜ.27ರಂದು ಪಣಂಬೂರು ಕಡಲ ತೀರದಲ್ಲಿ ನಡೆಯಲಿದೆ.
27ರಂದು ಬೆಳಗ್ಗಿನ ಜಾವ 5:30ಕ್ಕೆ ಮಹಾಲಸಾ ವಿದ್ಯಾರ್ಥಿಗಳು ಮರಳು ಕಲಾಕೃತಿ ರಚನೆ ಆರಂಭಿಸಲಿದ್ದು, ಸಂಜೆ 4 ಗಂಟೆ ಪೂರ್ಣಗೊಳ್ಳಲಿದೆ. ‘ಯುವ ಜನತೆ ಮತ್ತು ಮಾದಕ ವಸ್ತುಗಳು’ ಎಂಬ ವಿಷಯದಡಿ ಕಲಾಕೃತಿ ರಚನೆಗೊಳ್ಳಲಿದೆ ಮಹಾಲಸಾ ಕಾಲೇಜಿನ ಕಲಾ ತಂಡ ‘ಇನ್‌ಸ್ಯಾನಿಟಿ’ಯ ವಿದ್ಯಾರ್ಥಿ ಮುಖಂಡರಾದ ಅಶ್ವತ್ ಭಟ್ ಹಾಗೂ ಮಹೀಂದ್ರ ಆಚಾರ್ಯ ತಿಳಿಸಿದ್ದಾರೆ.
ರೆಡ್‌ಕ್ರಾಸ್‌ನ ಜಿಲ್ಲಾ ವಿಪತ್ತು ನಿರ್ವಹಣಾ ಉಪ ಸಮಿತಿ ಅಧ್ಯಕ್ಷ ವೇಣು ಶರ್ಮಾ, ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್, ಎಂಆರ್‌ಪಿಎಲ್ ಡಿಜಿಎಂ (ಎಚ್‌ಆರ್) ಲಕ್ಷ್ಮೀಕುಮಾರನ್, ಮಹಾಲಸಾ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ನಾಯಕ್ ಪಾಲ್ಗೊಳ್ಳಲಿದ್ದಾರೆ.
Next Story





