ಜ.24: ಬಾಕ್ರಬೈಲ್‌ಗೆ ಪೆರೋಡ್ ಉಸ್ತಾದ್
ವರ್ಕಾಡಿ,ಜ.23: ಕೇರಳ ಮುಸ್ಲಿಂ ಜಮಾಅತ್ ಎಸ್.ವೈ.ಎಸ್ ಬಾಕ್ರಬೈಲ್ ಸಕರ್ರ್ಲ್, ಎಸ್ಸೆಸ್ಸೆಫ್ ಪಾತೂರು ಸೆಕ್ಟರ್ ವತಿಯಿಂದ ತಾಜುಲ್ ಉಲಮಾ, ನೂರುಲ್ ಉಲಮಾ, ಸೈಯದ್ ವೈಲತ್ತೂರು ತಂಙಳ್ ಅನುಸ್ಮರಣೆ ಹಾಗೂ ಸಿರಾಜುಲ್ ಹುದಾ ಕುಟ್ಯಾಡಿ ಸಿಲ್ವರ್ ಜುಬಿಲಿ ಪ್ರಚಾರ ಸಮ್ಮೇಳನವು ಜ.24ಕ್ಕೆ ಬಾಕ್ರಬೈಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಯಶಸ್ವಿಗೆ ಇಬ್ರಾಹೀಂ ಹಾಜಿ ನಡಿಬೈಲ್‌ರ ಅಧ್ಯಕ್ಷತೆಯಲ್ಲಿ 313 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಸಮಸ್ತ ಉಪಾಧ್ಯಕ್ಷ ತಾಜುಶ್ಶರೀಅ ಅಲಿ ಕುಂಞಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಶೈಖುನಾ ಬೇಕಲ ಉಸ್ತಾದ್, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
ಸೈಯದ್ ಪಿ.ಎಸ್ ಆಟಕ್ಕೋಯ ತಂಙಳ್ ಪಂಜಿಕ್ಕಲ್, ಸೈಯದ್ ಅಶ್ರಫ್ ತಂಙಳ್ ಆದೂರು, ಸೈಯದ್ ಜಲಾಲುದ್ದೀನ್ ತಂಙಳ್ ಮಳ್‌ಹರ್, ಸೈಯದ್ ಶಿಹಾಬುದ್ದೀನ್ ಅಲ್‌ಬುಖಾರಿ ತಲಕ್ಕಿ, ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ, ಹಮೀದ್ ಮುಸ್ಲಿಯಾರ್ ಆಲಂಪಾಡಿ, ಮೂಸಲ್ ಮದನಿ ತಲಕ್ಕಿ, ಮುಹಮ್ಮದ್ ಸಖಾಫಿ ಪಾತೂರು, ಮುಹಮ್ಮದ್ ಸಖಾಫಿ ತೋಕೆ, ಸಿದ್ದೀಖ್ ಸಖಾಫಿ ಆವಳಂ, ಜಬ್ಬಾರ್ ಸಖಾಫಿ ಪಾತೂರು ಭಾಷಣ ಮಾಡಲಿದ್ದಾರೆ





