ಉಳ್ಳಾಲ ಮಾಸ್ತಿಕಟ್ಟೆ: ರಕ್ತದಾನ ಶಿಬಿರ

ಉಳ್ಳಾಲ,ಜ.23: ಯುವಸಮುದಾಯ ಸಮಾಜಕ್ಕೆ ಪೂರಕವಾಗಿರುವ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಹೆತ್ತವರ ಆಸ್ತಿಯ ಜತೆಗೆ ಸಮಾಜದ ಆಸ್ತಿಯೂ ಆಗುವುದರಿಂದ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ, ಸೋಕರ್ಸ್ ಉಳ್ಳಾಲ ಹಾಗೂ ಮೇಲಂಗಡಿ ಕಲ್ಚರಲ್ ಅಸೋಸಿಯೇಶನ್‌ನ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಉಳ್ಳಾಲದ ಮಾಸ್ತಿಕಟ್ಟೆ ಜಂಕ್ಷನ್‌ನಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ವಾಟ್ಸ್ ಆ್ಯಪ್ ಗುಂಪಿನ ಅಡ್ಮಿನ್ ನವಾಝ್ ಉಳ್ಳಾಲ, ಚೆಂಬುಗುಡ್ಡೆ ಜುಮಾ ಮಸೀದಿಯ ಖತೀಬ್ ಖಲಂದರ್ ಸಖಾಫಿ ದುಆ ನೆರವೇರಿಸಿದರು. ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಶರತ್ ಕುಮಾರ್, ಉಳ್ಳಾಲ ನಗರಸಭೆ ಸದಸ್ಯರಾದ ಮುಸ್ತಾಫ ಅಬ್ದುಲ್ಲ, ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಸೈಯದ್ ಮದನಿ ಅರೆಬಿಕ್ ಟ್ರಸ್ಟಿನ ಮಾಜಿ ಉಪಾಧ್ಯಕ್ಷ ಬಿ.ಜಿ.ಹನೀಫ್ ಹಾಜಿ, ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್ ಸ್ಥಾಪಕ ನಿಸಾರ್ ಉಳ್ಳಾಲ್ ದಮಾಮ್, ಜಿಲ್ಲಾ ಯುವಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್, ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ ಮತ್ತು ಉಡುಪಿ ಕಾರ್ಯದರ್ಶಿ ಸಲೀಂ ಯು.ಬಿ., ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಅಡ್ಮಿನ್‌ಗಳಾದ ಆಶಿಕ್ ಕುಕ್ಕಾಜೆ, ಮುಸ್ತಫಾ ಅಡ್ಡೂರು ದೆಮ್ಮೆಲೆ, ಇಕ್ಬಾಲ್ ಕೆನರಾ, ಸದಸ್ಯರಾದ ಗಝಲ್ ಅಲಿ, ಹೆಲ್ಪ್ ಇಂಡಿಯಾ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಉದ್ಯಮಿ ಯು.ಎಚ್.ಹಸೈನಾರ್ ಉಪಸ್ಥಿತರಿದ್ದರು.
ಸಲಾಂ ಮದನಿ ಉಳ್ಳಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







