ಅಪರಿಚಿತ ವಾಹನ ಢಿಕ್ಕಿ : ಮಹಿಳೆ ಗಂಭೀರ
ಮುಂಡಗೋಡ,ಜ.23 : ಅಪರಿಚಿತ ದ್ವಿ ಚಕ್ರ ವಾಹನವೊಂದು ಢಿಕ್ಕಿ ಹೊಡೆದು ಮಹಿಳೆಯೊರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಲಘಟಗಿ-ಮುಂಡಗೋಡ ರಸ್ತೆ ಇಂದೂರ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡವಳನ್ನು ಆಂಧ್ರಪ್ರದೇಶದ ಮೂಲದ ಜಯಮ್ಮ ಓಬಳೇಶ(50) ಎಂದು ತಿಳಿದು ಬಂದಿದೆ.
ರಸ್ತೆ ಪಕ್ಕದಲ್ಲಿ ಕೇಬಲ್ ಹಾಕುವ ಕೆಲಸದಲ್ಲಿ ನಿರತರಾಗಿದ್ದ ಜಯಮ್ಮ, ಮುಂಡಗೋಡ ದಿಕ್ಕಿಗೆ ವಾಹನ ಚಾಲನೆ ಮಾಡಿಕೊಂಡು ಬಂದು ಮಹಿಳೆಗೆ ಢಿಕ್ಕಿಪಡಿಸಿ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ವಾಹನದ ಢಿಕ್ಕಿಯಿಂದ ಮಹಿಳೆಯು ಕಾಲಮುರಿತಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾಗಿದೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





