ನಂದಿನಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ

ಮಂಗಳೂರು, ಜ.23: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಸೋಮವಾರ ನಗರದಲ್ಲಿ ನಡೆದ ನಂದಿನಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ದ.ಕ. ಜಿಪಂ ಸಿಇ ಡಾ. ಎಂ.ಆರ್. ರವಿ, ಡಿಡಿಪಿಐ ವಾಲ್ಟರ್ ಡಿಮೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯ ಬಹುಮಾನಿತ ವಿದ್ಯಾರ್ಥಿಗಳ ಹೆಸರು ಮತ್ತು ವಿವರ ಹೀಗಿವೆ.
*ಹಿರಿಯ (8ರಿಂದ 10ನೆ ತರಗತಿಯ ವಿದ್ಯಾರ್ಥಿಗಳು)
ಪ್ರಥಮ: ಗೌರವ ದೇವ -ಸಂತ ಅಲೋಯಸ್ ಶಾಲೆ ಮಂಗಳೂರು 10,000 ರೂ.ಮತ್ತು ದ್ವಿತೀಯ: ಪೂಜಾ- ಸ್ನೇಹಾ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ 6,000 ರೂ. ಹಾಗು ತೃತೀಯ: ಅತುಲ್ -ಕೆನರಾ ಹೈಸ್ಕೂಲ್ ಕೊಡಿಯಾಲ್‌ಬೈಲ್, 3,000 ರೂ.
*ಕಿರಿಯ (5 ರಿಂದ 7ನೆ ತರಗತಿಯ ವಿದ್ಯಾರ್ಥಿಗಳು)
ಪ್ರಥಮ : ಮೋಕ್ಷಿತ್ ಸುರೇಶ್- ಡೆಲ್ಲಿ ಪಬ್ಲಿಕ್ ಸ್ಕೂಲ್ ಎಂ.ಆರ್.ಪಿ.ಎಲ್, ಮಂಗಳೂರು 10,000ರೂ. ಮತ್ತು ದ್ವಿತೀಯ: ಅನನ್ಯಾ ಎಚ್ - ಕೆನರಾ ಹಿರಿಯ ಪ್ರಾಥಮಿಕ ಶಾಲೆ - ಉರ್ವ, ಮಂಗಳೂರು 6,000ರೂ. ಹಾಗು ತೃತೀಯ: ಪ್ರಣವ್ ಕಿಣಿ - ರೋಟರ್ ಅಂಗ್ಲ ಮಾಧ್ಯಮ ಶಾಲೆ, ಮೂಡುಬಿದಿರೆ, 3,000 ರೂ.
ಅಲ್ಲದೆ ಪ್ರತಿಯೊಂದು ವಿಭಾಗದಲ್ಲಿ 15ರಂತೆ 30 ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕಾರ ಬಹುಮಾನ ತಲಾ 1,000 ರೂ.ನಂತೆ 30,000 ರೂ.ಗಳನ್ನು ವಿತರಿಸಲಾಗಿದೆ. ಸ್ಪರ್ಧೆಯಲ್ಲಿ ಒಟ್ಟು 649 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







