ಮಹಾರಾಜಾಸ್‌ಗೆ ಎಬಿವಿಪಿಯಿಂದ ಸೆಗಣಿನೀರು !

ಕೊಚ್ಚಿ,ಜ.24: ಮಹಾರಾಜಾಸ್ ಕಾಲೇಜಿಗೆ ನಡೆಸಲಾದ ಎಬಿವಿಪಿ ಕಾರ್ಯಕರ್ತರ ಪ್ರತಿಭಟನಾ ಜಾಥಾವನ್ನು ಪಾಲಕ್ಕಾಡ್ ವಿಕ್ಟೋರಿಯ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಟಿ.ಎನ್.ಸರಸು ಉದ್ಘಾಟಿಸಿದರು. ಪ್ರತಿಭಟನಾ ಸೂಚಕವಾಗಿ ಎಸ್ಸೆಫ್ ಐ ಕಾರ್ಯಕರ್ತರು ಪ್ರಿನ್ಸಿಪಾಲ್‌ರ ಕುರ್ಚಿಯನ್ನು ಸುಟ್ಟುಹಾಕಿದಲ್ಲಿ ಎಬಿವಿಪಿ ಕಾರ್ಯಕರ್ತರು ಸೆಗಣಿ ನೀರು ಸಿಂಪಡಿಸಿದರು.
ಪ್ರತಿಭಟನಾ ಜಾಥ ಉದ್ಘಾಟಿಸಿ ಮಾತಾಡಿದ ಸರಸು ಮಹಾರಾಜಾಸ್ ಅಧ್ಯಾಪಕರ ವಿರುದ್ಧ ಎಸ್ಸೆಫ್ ಐಯ ನಕಾರಾತ್ಮಕ ನಿಲುವನ್ನು ಸಾಂಸ್ಕೃತಿಕ ನಾಯಕರು ಯಾಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಅಪಮಾನವಾಗಿ ಎಸ್ಸೆಫ್ ಐ ಆಂದೋಲನ ಬದಲಾಗಿದೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಮೆ ಕೋರಬೇಕೆಂದು ಸರಸು ಆಗ್ರಹಿಸಿದರು. ಎಬಿವಿಪಿ ಜಾಥಾವನ್ನು ಪೊಲೀಸರು ಕಾಲೇಜಿನ ಮುಂಭಾಗದಲ್ಲಿ ತಡೆದರು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಒ. ನಿತೀಶ್, ರಾಜ್ಯ ಸೋಶಿಯಲ್ ಮೀಡಿಯ ಕನ್ವೀನರ್ ಕೆ. ವಿ. ಮನೋಜ್, ಜಿಲ್ಲಾಕನ್ವೀನರ್ ವಿಷ್ಣು ಸುರೇಶ್, ಬಿಜೆಪಿ ಎರ್ನಾಕುಲಂ ಮಂಡಲ ಅಧ್ಯಕ್ಷ ಸಿ.ಜಿ. ರಾಜಗೋಪಾಲ್ ಮುಂತಾದವರು ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.





