ಆಡಳಿತಾಧಿಕಾರಿಗಳು 70 ವರ್ಷ ವಯೋಮಿತಿ ಮೀರಿರಬಾರದು: ಸುಪ್ರೀಂ
ಎಲ್ಲ 9 ಹೆಸರು ತಿರಸ್ಕೃತ, ಹೆಸರು ಸೂಚಿಸಲು ಕಪಿಲ್ ಸಿಬಲ್‌ಗೆ ಸೂಚನೆ

ಹೊಸದಿಲ್ಲಿ, ಜ.24: ಮುಂದಿನ ತಿಂಗಳು ನಡೆಯುವ ಐಸಿಸಿ ಸಭೆಗೆ ಮೊದಲು ಮೂವರು ಆಯ್ದ ಆಡಳಿತಾಧಿಕಾರಿಯ ಹೆಸರನ್ನು ಜ.27 ರಂದು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರಕಾರ ಹಾಗೂ ಬಿಸಿಸಿಐಗೆ ಸುಪ್ರೀಂಕೋರ್ಟ್ ಸೂಚನೆ ನೀಡಿ ಆದೇಶಿಸಿದೆ.
ಬಿಸಿಸಿಐಗೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, 9 ಜನರ ಆಡಳಿತಾಧಿಕಾರಿಗಳ ಪಟ್ಟಿ ತುಂಬಾ ದೀರ್ಘವಾಗಿದೆ. ಆಡಳಿತಾಧಿಕಾರಿಗಳು 70 ವರ್ಷ ವಯೋಮಿತಿ ಮೀರಿರಬಾರದು. ಲೋಧಾ ಸಮಿತಿ ಶಿಫಾರಸಿನ ಪ್ರಕಾರ ಪಟ್ಟಿಯಲ್ಲಿರುವ 70 ವರ್ಷಗಿಂತ ಹೆಚ್ಚಿನ ವಯಸ್ಸಿನವರನ್ನು ಆಯ್ಕೆಗೆ ಪರಿಗಣಿಸುವುವಂತಿಲ್ಲ ಎಂದು ಆದೇಶಿಸಿದ ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು.
ಲೋಧಾ ಸಮಿತಿ, ಅಬಿಕಸ್ ಕ್ಯೂರಿ ಗೋಪಾಲ್ ಸುಬ್ರಹ್ಮಣ್ಯಂ ಹಾಗೂ ಹಿರಿಯ ವಕೀಲ ಅನಿಲ್ ದಿವಾನ್ ಬಿಸಿಸಿಐ ಆಡಳಿತಾಧಿಕಾರಿ ಹುದ್ದೆಗೆ 9 ಜನರ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು. ಬಿಸಿಸಿಐಗೆ ನೂತನ ಚುನಾವಣೆ ನಡೆಯುವ ಮೊದಲು ಆಡಳಿತಾಧಿಕಾರಿಯೊಬ್ಬರನ್ನು ನೇಮಿಸಲು ನ್ಯಾಯಾಲಯ ಸೂಚಿಸಿತ್ತು.
ಲೋಧಾ ಸಮಿತಿ ಆಡಳಿತಾಧಿಕಾರಿ ನೇಮಕ ಮಾಡುವುದನ್ನು ವಿರೋಧಿಸಿದ ಬಿಸಿಸಿಐ ಪರ ವಕೀಲರು, ಆಡಳಿತಾಧಿಕಾರಿಗಳ ಹೆಸರನ್ನು ಸೂಚಿಸುವ ಅವಕಾಶ ನಮಗೆ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ರೈಲ್ವೇಸ್, ಸರ್ವಿಸಸ್, ಯುನಿರ್ಸಿಟಿಯನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಸಹಮತ ವ್ಯಕ್ತಪಡಿಸಿದರು.
ಬಿಸಿಸಿಐಗೆ ಆಡಳಿತಾಧಿಕಾರಿ ನೇಮಕ ವಿಚಾರವನ್ನು 2 ವಾರ ಮುಂದೂಡಬೇಕು. ಬಿಸಿಸಿಐಗೆ ಆಡಳಿತಾಧಿಕಾರಿ ಹೆಸರನ್ನು ಸೂಚಿಸುವ ಅವಕಾಶ ನೀಡಬೇಕೆಂದು ಎಂದು ಅಟಾರ್ನಿ ಜನರಲ್ ರೋಹ್ಟಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು.
ರೋಹ್ಟಗಿಗೆ ಬೌನ್ಸರ್ ಎಸೆದ ಸುಪ್ರೀಂಕೋರ್ಟ್,ನಾವು ಜುಲೈನಲ್ಲಿ ಆದೇಶ ಜಾರಿಗೊಳಿಸುವಾಗ ನೀವು ಎಲ್ಲಿದ್ದೀರಿ? ಆಗ ಗೈರು ಹಾಜರಿದ್ದ ನೀವು ಕಳೆದ ವಾರವಷ್ಟೇ ಇಲ್ಲಿಗೆ ಪ್ರವೇಶಿಸಿದ್ದೀರಿ ಎಂದು ಹೇಳಿತು.
ರೈಲ್ವೇಸ್, ಸರ್ವಿಸಸ್, ಯುನಿವರ್ಸಿಟಿ ಸಂಸ್ಥೆಗಳು ಬಿಸಿಸಿಐನ 30 ಪೂರ್ಣ ಸದಸ್ಯತ್ವದಲ್ಲಿ ಸ್ಥಾನ ಪಡೆದಿದ್ದು, ಕಳೆದ 50 ವರ್ಷಗಳಿಂದ ಮತದಾನ ಹಕ್ಕು ಪಡೆದಿದ್ದರು. ಸ್ವಂತ ಸ್ಟೇಡಿಯಂನ್ನು ಹೊಂದಿದ್ದು, ಉದ್ಯೋಗವಕಾಶ ನೀಡಿದೆ. ಆದರೆ, ಅವರಿಂದ ಪೂರ್ಣ ಸದಸ್ಯತ್ವವನ್ನು ಕಿತ್ತುಕೊಳ್ಳಲಾಗಿದೆ. ಅವರಿಗೆ ಗೌರವವಿಲ್ಲವಾಗಿದೆ ಎಂದು ಜ.20ರ ವಿಚಾರಣೆ ಬಳಿಕ ಮಾಧ್ಯಮಗಳಿಗೆ ರೊಹ್ಟಗಿ ತಿಳಿಸಿದ್ದರು.
ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಆಡಳಿತಾಧಿಕಾರಿಗಳ ಪಟ್ಟಿಯಲ್ಲಿ ಕ್ರಿಕೆಟ್ ಮಂಡಳಿಯಿಂದ ಯಾವುದೇ ಅಭ್ಯರ್ಥಿಯಿಲ್ಲ. ಅಬಿಕಸ್ ಕ್ಯೂರಿ ಗೋಪಾಲ್ ಸುಬ್ರಹ್ಮಣ್ಯಂ ಹಾಗೂ ಹಿರಿಯ ವಕೀಲ ಅನಿಲ್ ದಿವಾನ್ ಹಾಗೂ ದೂರುದಾರರು ಆಡಳಿತಾಧಿಕಾರಿ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಬಿಸಿಸಿಐ ವಾದಿಸಿತು.
ಹಿರಿಯ ವಕೀಲರಾದ ಕಪಿಲ್ ಸಿಬಲ್‌ಗೆ ಭಾರತೀಯ ಕ್ರಿಕೆಟ್‌ನ ಮಧ್ಯಂತರ ಸಮಿತಿಯನ್ನು ಸೂಚಿಸಲು ಸಲಹೆ ನೀಡುವ ಅವಕಾಶ ನೀಡಿದ ನ್ಯಾಯಾಲಯ ಮೂರು ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಮಾಡುವಂತೆ ಆದೇಶಿಸಿತು.
ಆಡಳಿತಾಧಿಕಾರಿಗಳ ನೇಮಕ ಮಾಡುವುದನ್ನು ವಿರೋಧಿಸಿದ ಬಿಸಿಸಿಐ ಪರ ವಕೀಲರು, ಆಡಳಿತಾಧಿಕಾರಿಗಳ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವ ಅವಕಾಶ ನಮಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಸಹಮತ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಸಿಐ ಘನತೆ ಧಕ್ಕೆಯಾಗಿದೆ. ಆಡಳಿತಾಧಿಕಾರಿ ನೇಮಕ ವಿಚಾರವನ್ನು 2 ವಾರ ಮುಂದೂಡಬೇಕೆಂದು ಎಂದು ಅಟಾರ್ನಿ ಜನರಲ್ ವಾದಿಸಿದರು. ಇದಕ್ಕೆ ಖಾರವಾಗಿಯೇ ಉತ್ತರಿಸಿದ ಸುಪ್ರೀಂಕೋರ್ಟ್,ನಾವು ಜುಲೈನಲ್ಲಿ ಆದೇಶ ಜಾರಿಗೊಳಿಸುವಾಗ ನೀವು ಎಲ್ಲಿದ್ದೀರಿ? ಕಳೆದ ವಾರವಷ್ಟೇ ನೀವು ಇಲ್ಲಿಗೆ ಪ್ರವೇಶಿಸಿದ್ದೀರಿ ಎಂದು ಹೇಳಿತು.
ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಆಡಳಿತಾಧಿಕಾರಿಗಳ ಪಟ್ಟಿಯಲ್ಲಿ ಕ್ರಿಕೆಟ್ ಮಂಡಳಿಯಿಂದ ಯಾವುದೇ ಅಭ್ಯರ್ಥಿಯಿಲ್ಲ. ಅಬಿಕಸ್ ಕ್ಯೂರಿ ಗೊಪಾಲ ಸುಬ್ರಹ್ಮಣ್ಯಂ ಹಾಗೂ ಹಿರಿಯ ವಕೀಲ ಅನಿಲ್ ದಿವಾನ್ ಹಾಗೂ ಅರ್ಜಿದಾರರು ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಬಿಸಿಸಿಐ ವಾದಿಸಿತು.







