Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಸ್ಲಿಮರು,ಒಂಟಿ ಮಹಿಳೆಯರಿಗೆ ನಗರಗಳಲ್ಲಿ...

ಮುಸ್ಲಿಮರು,ಒಂಟಿ ಮಹಿಳೆಯರಿಗೆ ನಗರಗಳಲ್ಲಿ ಮನೆ ನೀಡುವಲ್ಲಿ ತಾರತಮ್ಯ

ವಾರ್ತಾಭಾರತಿವಾರ್ತಾಭಾರತಿ24 Jan 2017 4:18 PM IST
share
ಮುಸ್ಲಿಮರು,ಒಂಟಿ ಮಹಿಳೆಯರಿಗೆ ನಗರಗಳಲ್ಲಿ ಮನೆ ನೀಡುವಲ್ಲಿ ತಾರತಮ್ಯ

ಮುಂಬೈ,ಜ.24: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರದ ಸಂದರ್ಭ ‘ತಾರತಮ್ಯ ಮಾಡದ ಮನೆಗಳು ’ಎಂಬ ಘೋಷಣೆಯೊಂದಿಗೆ ಜಾಹೀರಾತೊಂದು ನಮ್ಮ ದೇಶದಲ್ಲಿ ಪ್ರಕಟಗೊಂಡಿತ್ತು. ಲಿಂಗ,ಧರ್ಮ ಅಥವಾ ಜಾತಿಗಳ ಆಧಾರದಲ್ಲಿ ಭಾರತೀಯ ವಸತಿ ಮಾರುಕಟ್ಟೆಯಲ್ಲಿ ಹಾಸುಹೊಕ್ಕಾಗಿರುವ ಪೂರ್ವಗ್ರಹವನ್ನು ಅಂತ್ಯಗೊಳಿಸುವಂತೆ ಈ ಜಾಹೀರಾತು ಕರೆ ನೀಡಿತ್ತು.

 ಜಾಹೀರಾತು ಮಾಮೂಲಿಗಿಂತ ಭಿನ್ನವಾಗಿದ್ದು, ಅದು ಕೆದಕಿದ್ದ ವಿಷಯ ಒಬ್ಬಂಟಿಗಳು,ಮಾಂಸಾಹಾರಿಗಳು,ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಅಥವಾ ಪ್ರದೇಶಕ್ಕೆ ಸೇರಿದವರು ಎಂಬ ಕಾರಣದಿಂದ ಮನೆಗಳನ್ನು ಬಾಡಿಗೆಗೆ ಅಥವಾ ಖರೀದಿಗೆ ಪಡೆಯಲು ಪ್ರಯತ್ನಿಸಿ ನಿರಾಕರಿಸಲ್ಪಟ್ಟ ಲಕ್ಷಾಂತರ ಭಾರತೀಯರ ಅನುಭವವೇ ಆಗಿತ್ತು.

ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಒಂಟಿಜೀವಿಗಳನ್ನು ದೂರವಿಡಲು ಮನೆಮಾಲೀಕರು ತಾವೇ ಮಾಡಿಕೊಂಡಿರುವ ಅನೌಪಚಾರಿಕ ನಿಯಮಗಳು ಮತ್ತು ಪ್ರದರ್ಶಿಸುತ್ತಿರುವ ತಾರತಮ್ಯದಿಂದಾಗಿ ಇಂದು ಭಾರತೀಯ ನಗರಗಳ ಬಹುಸಂಸ್ಕೃತಿಯ ಸ್ವರೂಪವು ನಶಿಸುತ್ತಿದೆ ಮತ್ತು ಸಮುದಾಯಗಳನ್ನು ವಿಭಜಿಸಿ ಅವು ತಮ್ಮದೇ ಆದ ಗುಂಪಿನಲ್ಲಿ ವಾಸವಾಗುವಂತೆ ಮಾಡುತ್ತಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

 ನಾವು 2017ರಲ್ಲಿದ್ದೇವೆ...ಆದರೂ ತಾರತಮ್ಯ ನಮ್ಮನ್ನು ಬಿಟ್ಟಿಲ್ಲ ಎಂದು ಜಾಹೀರಾತನ್ನು ನೀಡಿದ್ದ ನೆಸ್ಟಅವೇ ಟೆಕ್ನಾಲಜೀಸ್‌ನ ರಿಷಿ ಡೋಗ್ರಾ.

  ಜನರು ದೇಶದಲ್ಲಿ ಎಲ್ಲಿಯೂ ಮುಕ್ತವಾಗಿ ಸಂಚರಿಸಲು ಮತ್ತು ಎಲ್ಲಿ ಬೇಕಾದರೂ ಮನೆಯೊಂದನ್ನು ಹೊಂದುವುದು ಸಾಧ್ಯವಾಗಬೇಕು ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ವಾಸಿಸಲು ಮನೆಯೊಂದನ್ನು ಹುಡುಕಿಕೊಳ್ಳುವಲ್ಲಿ ಭಾರೀ ತೊಂದರೆಗಳನ್ನು ಅನುಭವಿಸಿದ್ದ ಡೋಗ್ರಾ ಮತ್ತು ಅವರ ಮೂವರು ಕಾಲೇಜು ಸಹಪಾಠಿಗಳು ಕಂಪನಿಯನ್ನು ಸ್ಥಾಪಿಸಿದ್ದು, ಡೋಗ್ರಾ ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಇಂತಹ ತಾರತಮ್ಯಗಳಿಂದಾಗಿ ಹಲವಾರು ಜನರು ಮನೆಗಳನ್ನು ಹುಡುಕಿಕೊಂಡು ನಗರಗಳಿಂದ ದೂರದ ಪ್ರದೇಶಗಳಿಗೆ ತೆರಳುವಂತಾಗಿದೆ. ಇದರಿಂದಾಗಿ ಈಗಾಗಲೇ ಬಾಡಿಗೆ ತುಂಬ ದುಬಾರಿಯಾಗಿರುವ ಭಾರತೀಯ ನಗರಗಳು ತಮ್ಮ ವೈವಿಧ್ಯತೆ ಮತ್ತು ಕಾಸ್ಮೊಪಾಲಿಟನ್ ಇಮೇಜ್‌ನ್ನು ಕಳೆದುಕೊಳ್ಳುತ್ತಿವರೆ.

ಭಾರತದ ಆರ್ಥಿಕ ರಾಜಧಾನಿ ಮತ್ತು ದೇಶಾದ್ಯಂತದ ವಲಸಿಗರನ್ನು ಚುಂಬಕದಂತೆ ಸೆಳೆಯುತ್ತಿರುವ ಮುಂಬೈ ಮಹಾನಗರಿ ಸಾಂಪ್ರದಾಯಿಕವಾಗಿ ಕ್ರೈಸ್ತರು, ಪಾರ್ಸಿಗಳು, ಬೋರಿ ಮುಸ್ಲಿಮರು ಮತ್ತಿತರರು ವಾಸವಾಗಿದ್ದ ಪ್ರದೇಶಗಳನ್ನು ಹೊಂದಿತ್ತು. ಇತರ ಸಮುದಾಯಗಳ ಸದಸ್ಯರಿಗೆ ನೆರವಾಗಲು ಈ ಜನರು ಹೌಸಿಂಗ್ ಸೊಸೈಟಿಗಳನ್ನು ಸ್ಥಾಪಿಸಿದ್ದರು.

ಮುಂಬೈ ಬೆಳೆಯುತ್ತ ಹೋದಂತೆ ಮತ್ತು ಹೆಚ್ಚೆಚ್ಚು ವಲಸಿಗರು ಬಂದು ಸೇರಿಕೊಳ್ಳುತ್ತಿದ್ದಂತೆ ಅದಾಗಲೇ ಪ್ರಬಲವಾಗಿ ಬೆಳೆದು ನಿಂತಿದ್ದ ಸೊಸೈಟಿಗಳು ಧರ್ಮ,ಜಾತಿ,ಆಹಾರ ಪದ್ಧತಿ.......ಅಷ್ಟೇ ಏಕೆ,ವೃತ್ತಿಗಳ ಆಧಾರದಲ್ಲಿಯೂ ಮನೆಗಳನ್ನು ನೀಡುವಲ್ಲಿ ತಾರತಮ್ಯವನ್ನು ಆರಂಭಿಸಿದ್ದವು. 1992-93ರ ಭೀಕರ ಹಿಂದು-ಮುಸ್ಲಿಮ್ ಕೋಮು ಗಲಭೆಯ ಬಳಿಕ ಈ ವಿಭಜನೆ ಇನ್ನಷ್ಟು ಬೆಳೆದಿದ್ದು, ಅದು ಇಂದಿಗೂ ಜಾರಿಯಲ್ಲಿದೆ ಎನ್ನುತ್ತಾರೆ ಎನ್‌ಜಿಒ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ್‌ನ ಸಹಸ್ಥಾಪಕಿ ಝಕಿಯಾ ಸೋಮನ್.

 ಫ್ಲಾಟ್‌ವೊಂದರಲ್ಲಿ ವಾಸವಿದ್ದ ಮುಸ್ಲಿಮ್ ಮಹಿಳೆಯೋರ್ವಳನ್ನು ಆಕೆಯ ಧರ್ಮದ ಕಾರಣದಿಂದ ಏಳೇ ದಿನಗಳಲ್ಲಿ ಒಕ್ಕಲೆಬ್ಬಿಸಿದ ಬಳಿಕ 2015ರಲ್ಲಿ ‘ಇಂಡಿಯನ್ಸ್ ಅಗೇನಸ್ಟ್ ಡಿಸ್ಕ್ರಿಮಿನೇಷನ್ ’ ಹೆಸರಿನ ಫೇಸ್‌ಬುಕ್ ಗುಂಪು ಅಸ್ತಿತ್ವಕ್ಕೆ ಬಂದಿತ್ತು.

ಹಲವಾರು ಪ್ರಕರಣಗಳಲ್ಲಿ ಹೌಸಿಂಗ್ ಸೊಸೈಟಿಗಳ ತಾರತಮ್ಯದ ವಿರುದ್ಧ ನ್ಯಾಯಾಲಯಗಳು ತೀರ್ಪು ನೀಡಿವೆ, ಆದರೆ ಅದರ ಪರವಾಗಿಯೂ ತೀರ್ಪುಗಳು ಬಂದಿವೆ.

2005ರ ಪ್ರಕರಣವೊಂದರಲ್ಲಿ ಅಹ್ಮದಾಬಾದ್‌ನ ಪಾರ್ಸಿ ಸೊಸೈಟಿಯ ಪರವಾಗಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಅದು ತನ್ನ ಸದಸ್ಯತ್ವವನ್ನು ಪಾರ್ಸಿಗಳಿಗೆ ಸೀಮಿತಗೊಳಿಸಬಹುದಾಗಿದೆ ಮತ್ತು ಇತರರಿಗೆ ಪ್ರವೇಶ ನೀಡದಿರುವ ಹಕ್ಕನ್ನು ಹೊಂದಿದೆ ಎಂದು ಹೇಳಿತ್ತು.

ಮಹಾರಾಷ್ಟ್ರದ ಕರಡು ವಸತಿ ನೀತಿಯಲ್ಲಿ ಮನೆಗಳ ನೀಡಿಕೆಯಲ್ಲಿ ತಾರತಮ್ಯವನ್ನು ನಿಷೇಧಿಸಿದ್ದ ನಿಯಮವನ್ನು ಕೈಬಿಡಲಾಗಿದೆ. ಇದು ಮನೆಗಳನ್ನು ಬಾಡಿಗೆಗೆ ಅಥವಾ ಖರೀದಿಗೆ ಪಡೆಯುವವರ ಪಾಲಿಗೆ ಇನ್ನಷ್ಟು ತೊಂದರೆಯನ್ನುಂಟು ಮಾಡಬಹುದು. ತಾರತಮ್ಯದ ವಿರುದ್ಧ ಸಂವಿಧಾನವು ಈಗಾಗಲೇ ರಕ್ಷಣೆ ನೀಡಿದೆ. ಹೀಗಾಗಿ ಪ್ರತ್ಯೇಕ ನಿಯಮದ ಅಗತ್ಯವಿಲ್ಲ ಎಂದು ಸರಕಾರಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X