ಸೌದಿಯಲ್ಲಿ ಮರೆವು ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ!

ದಮ್ಮಾಂ,ಜ.24: ಸೌದಿ ಅರೇಬಿಯದಲ್ಲಿ ಅಲ್ಝಿಮರ್ಸ್ (ಮರೆವು ರೋಗ) ರೋಗಿಗಳ ಸಂಖ್ಯೆಯು ಭಾರೀ ಹೆಚ್ಚಳ ಸಂಭವಿಸಿದೆ ಎಂದು ವರದಿಯಾಗಿದೆ.
ವಿವಿಧ ಸ್ಥಿತಿಯಲ್ಲಿರುವ ಮರೆವು ರೋಗಿಗಳ ಸಂಖ್ಯೆ 50,000 ಮೀರಿದೆ ಎಂದು ಹೊಸ ಲೆಕ್ಕಗಳಿಂದ ಬಹಿರಂಗೊಂಡಿದೆ. ರೋಗಪೀಡಿತರಲ್ಲಿ ಹೆಚ್ಚಿನವರು ಮಹಿಳೆಯರು.
ರೋಗ ಉಲ್ಬಣಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ರತಿದಿನ 1500ದಿಂದ 2000 ರಿಯಾಲ್ ವೆಚ್ಚ ಆಗುತ್ತಿದೆ ಎಂದು ಈ ಕುರಿತು ವರದಿ ತಯಾರಿಸಿದ ಅಲ್ಝಿಮರ್ಸ್ ಸೈಂಟಿಫಿಕ್ ಅಸೋಶಿಯೇಶನ್ ಸದಸ್ಯ ಡಾ. ಲುಂಗ್ಯ ಬಾಸುದಾನ್ ಎಂದು ಹೇಳಿದ್ದಾರೆ.
ನಿಧಾನಮರಣದೆಡೆಗೆ ಸಾಗಿಸುವ ಈ ರೋಗ ಮಧ್ಯವಯಸ್ಕರು ಮತ್ತು ವಯಸ್ಸಾದವರಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಮೆದುಳಿನ ನಾಡಿವ್ಯೆಹದ ತೊಂದರೆಯಿಂದಾಗಿ ನೆನಪಿನ ಶಕ್ತಿ ನಾಶವಾಗುತ್ತದೆ.
ಈ ರೋಗ ಬಾಧಿಸಿದವರು ಚಿಂತನಾ ಶಕ್ತಿ, ನೆನಪಿನ ಶಕ್ತಿಮತ್ತು ಮಾತಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಖಿನ್ನತೆ ಇತ್ಯಾದಿ ಕಾಡುತ್ತವೆ. ವಿಶ್ರಮವಿಲ್ಲದ ದುಡಿಮೆ, ಮತ್ತು ವ್ಯಾಯಾಮದ ಕೊರತೆಯು ಈ ರೋಗಕ್ಕೆ ಕಾರಣವಾಗಿದೆ ಎಂದು ಲುಂಗ್ಯ ಬಾಸುದಾನ್ ಹೇಳಿದ್ದಾರೆಂದು ವರದಿ ತಿಳಿಸಿದೆ.







