ಪಡಿತರ ವಿತರಣಾ ವ್ಯವಸ್ಥೆ ಬಲಪಡಿಸಲು ಆಗ್ರಹಿಸಿ ಯುಡಿಎಫ್ ಪ್ರತಿಭಟನೆ

ಕಾಸರಗೋಡು , ಜ.24 : ಪಡಿತರ ವಿತರಣಾ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು , ಪಿಂಚಣಿ ವಿತರಣೆಯಲ್ಲಿನ ಲೋಪವನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಯುಡಿಎಫ್ ಜಿಲ್ಲಾ ಸಮಿತಿ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು.
ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯ ಬೆನ್ನಿ ಬೆಹನನ್ ಉದ್ಘಾಟಿಸಿದರು.
ಯುಡಿಎಫ್ ಜಿಲ್ಲಾಧ್ಯಕ್ಷ ಚೆರ್ಕಳಂ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಪಿ . ಗಂಗಾಧರನ್ ನಾಯರ್ , ಮಾಜಿ ಸಚಿವ ಸಿ. ಟಿ ಆಹಮ್ಮದಾಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀ೦ ಕುನ್ನಿಲ್ , ಎಂ. ಸಿ ಖಮರುದ್ದೀನ್ , ರಾಜೇಂದ್ರನ್ , ಕೋರನ್ ಮಾಸ್ಟರ್ , ಕೆ . ನೀಲಕಂಠನ್ , ಅಬ್ರಾಹಂ , ಎ. ವಿ ರಾಮಕೃಷ್ಣನ್ , ಎಂ . ಸಿ ಜೋಸ್ , ಎ. ಗೋವಿಂದನ್ ನಾಯರ್ ಮೊದಲಾದವರು ಮಾತನಾಡಿದರು.
Next Story





