ಕಂಬಳ ನಡೆಸಿರುವುದಕ್ಕೆ ನನ್ನನ್ನೂ ಬಂಧಿಸುವ ಯತ್ನ ನಡೆದಿತ್ತು : ರಮಾನಾಥ ರೈ
_0.jpg)
ಮಂಗಳೂರು.ಜ.24:‘‘ನಾನು ಕಂಬಳ ನಡೆಸಿದ ಸಂದರ್ಭದಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಮೇನಕಾ ಗಾಂಧಿ ನನ್ನ ಬಂಧನಕ್ಕೂ ಪ್ರಯತ್ನಿಸಿದ್ದಾರೆ.ಜಿಲ್ಲೆಯಲ್ಲಿ ಕಂಬಳದ ಮಹತ್ವದ ಬಗ್ಗೆ ಜನರಿಗೆ ಜಾಗೃತಿ ಇದೆ ನಿಷೇಧದ ವಿರುದ್ಧ ನಡೆಯುವ ಶಾಂತಿಯುತ ಹೋರಾಟಕ್ಕೆ ಎಲ್ಲರ ಬೆಂಬಲವಿದೆ ’’ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ತಮಿಳುನಾಡಿನ ಜಲ್ಲಿಕಟ್ಟಿನ ಮೇಲಿನ ನಿಷೇಧದ ವಿರುದ್ಧ ನಡೆದಿರುವ ಹೋರಾಟಕ್ಕಿಂತ ಭಿನ್ನವಾಗಿ ಕಾನೂನು ಬದ್ಧವಾದ ಶಾಂತಿಯುತ ಹೋರಾಟವನ್ನು ನಡೆಸಲು ಜನರು ಮುಂದಾಗಿರುವುದರಲ್ಲಿ ತಪ್ಪಿಲ್ಲ. ಕಂಬಳ ತುಳುನಾಡಿನ ಸಂಸ್ಕೃತಿಯ ಭಾಗವಾಗಿರುವುದರಿಂದ ಅದನ್ನು ನಡೆಸಲು ಅವಕಾಶ ನೀಡಬೇಕೆನ್ನುವುದು ಜನರ ಭಾವನೆಯಾಗಿದೆ. ಇದನ್ನು ನ್ಯಾಯಾಲಯ ಮನ್ನಿಸಬಹುದು ಎನ್ನುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಆದೇಶ ಮಾಡಬೆಕಾದ ಅಗತ್ಯವಿದ್ದರೆ ಮಾಡಲು ಸಿದ್ಧವಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
Next Story





