90 ನಗರಗಳಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆ

ಹೊಸದಿಲ್ಲಿ,ಜ.24: ಯುಜಿಸಿ-ನೆಟ್ ಪರೀಕ್ಷೆಯನ್ನು ರವಿವಾರ 90 ನಗರಗಳ 1,421 ಕೇಂದ್ರಗಳಲ್ಲಿ ನಡೆಸಲಾಗಿದೆ. ಸುಮಾರು 7.94 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಈ ಪೈಕಿ ಸುಮಾರು 4,500 ವಿದ್ಯಾರ್ಥಿಗಳು ಯೋಗ ವಿಷಯದಲ್ಲಿ ಪರಿಕ್ಷೆ ಬರೆದಿದ್ದಾರೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು ಮಂಗಳವಾರ ತಿಳಿಸಿದೆ.
ಇದೇ ಮೊದಲ ಬಾರಿಗೆ ಪರೀಕ್ಷೆಯ ಪಠ್ಯದಲ್ಲಿ ಯೋಗವನ್ನು ಸೇರಿಸಲಾಗಿದೆ ಎಂದು ಸಿಬಿಎಸ್‌ಇ ಹೇಳಿಕೆಯಲ್ಲಿ ತಿಳಿಸಿದೆ.
Next Story





