ಮಂಗಳೂರು : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಮಂಗಳೂರು , ಜ.24 : ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಹೆರಿಗೆ ಮತ್ತು ಪ್ರಸೂತಿ ವಿಭಾಗ ಮತ್ತು ಲಕ್ಷ್ಮೀ ಮೆಮೊರಿಯಲ್ ನರ್ಸಿಂಗ್ ಕಾಲೇಜಿನ ಸಹಭಾಗಿತ್ವದಲ್ಲಿ ಕುಂಟಿಕಾನದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ-2017 ಹಾಗೂ ಹೆಣ್ಣು ಮಕ್ಕಳ ವೀಕ್ಷಕ ದಿನವನ್ನಾಗಿ ಆಚರಿಸಲಾಯಿತು.
ಚೈಲ್ಡ್ ರೈಟ್ಸ್ ಪ್ರೊಟೆಕ್ಷನ್ ಕಮಿಷನ್‌ನ ಸದಸ್ಯ ಮರಿಸ್ವಾಮಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್‌ನ ನಿರ್ದೇಶಕಿ ಅಶ್ರಿತಾ ಪಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಲಾರಿಸ್ಸ ಮಾರ್ತಾ ಸಾಮಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನರ್ಸಿಂಗ್‌ನ ವಿದ್ಯಾರ್ಥಿಗಳಿಂದ ಹೆಣ್ಣು ಮಕ್ಕಳ ಪ್ರಾಮುಖ್ಯತೆಯ ಬಗ್ಗೆ ಕಿರು ನಾಟಕ ನಡೆಯಿತು.
ಡಾ.ಕವಿತಾ ಡಿಸೋಜಾ ಸ್ವಾಗತಿಸಿದರು. ಅಸೋಸಿಯೇಟ್ ಪ್ರೊಫೆಸರ್ ಮತ್ತು ಒಬಿಬಿ ವಿಭಾಗದ ಮುಖಸ್ಥೆ ಸಂಧ್ಯಾ ಡಿ. ಅಲ್ಮೇಡಾ ವಂದಿಸಿದರು.
ಉಪನ್ಯಾಸಕ ಗ್ರೆಟ್ಟಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು.
Next Story





