ಮಜೂರು: ಎಸ್ಸೆಸ್ಸೆಫ್ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಜ. 24: ಎಸ್ಸೆಸ್ಸೆಫ್ ಮಜೂರು ಶಾಖಾ ಮಹಾಸಭೆಯು ನಡೆಯಿತು. ಕೆ.ಸಿ.ಎಫ್. ದಮಾಮ್ ಘಟಕದ ನಾಯಕ ಬಶೀರ್ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು. ಶಾಖಾ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಉಚ್ಚಿಲ ಸೆಕ್ಟರ್ ಅಧ್ಯಕ್ಷ ಹಾಗೂ ಶಾಖಾ ಉಸ್ತುವಾರಿ ಅಬ್ದುಲ್ ಮಜೀದ್ ಹನೀಫಿ ಸಭೆಗೆ ಚಾಲನೆ ನೀಡಿದರು.
ಸಮಿತಿ ಸದಸ್ಯ ಮುಹಮ್ಮದ್ ಸಾಹಿಲ್ ವರದಿ ವಾಚಿಸಿದರು. ಕೋಶಾಧಿಕಾರಿ ಅಬ್ದುಲ್ ಖಾದರ್ ಆಯ-ವ್ಯಯ ಮಂಡಿಸಿದರು. ಮಹಾಸಭೆ ವೀಕ್ಷಕರಾಗಿ ಸೆಕ್ಟರ್ ಕೋಶಾಧಿಕಾರಿ ಸಲೀಮ್ ಫಕೀರ್ಣಕಟ್ಟೆ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಆಸಿಫ್ ಬೆಳಪು ಉಪಸ್ಥಿತರಿದ್ದರು. ಡಿವಿಷನ್ ಕೋಶಾಧಿಕಾರಿ ಶಾಹುಲ್ ಹಮೀದ್ ನಈಮಿ ಸಂಘಟನಾ ತರಗತಿ ನಡೆಸಿದರು. ಬಳಿಕ ನಡೆದ ನೂತನ ಸಮಿತಿ ರಚನೆಗೆ ಸೆಕ್ಟರ್ ತಾಜುಲ್ ಉಲಮಾ ರಿಲೀಫ್ ಚಯರ್‌ಮನ್ ಇಬ್ರಾಹಿಂ ಸಖಾಫಿ ನೇತೃತ್ವ ವಹಿಸಿದರು.
ನೂತನ ಪದಾಧಿಕಾರಿಗಳು
ನಿರ್ದೇಶಕರಾಗಿ ಎಂ.ಕೆ. ಅಬ್ದುರ್ರಶೀದ್ ಕಾಮಿಲ್, ಸಖಾಫಿ, ಅಧ್ಯಕ್ಷರಾಗಿ ಹುಸೈನ್ ಮೊಯ್ಯಟ್ಟು, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ಅಬೂ ತಾಹೀರ್
ಪ್ರ.ಕಾರ್ಯದರ್ಶಿಯಾಗಿ ಆಶಿಕ್ ಅಹ್ಮದ್ ಮಲ್ಲಾರ್, ಕಾರ್ಯದರ್ಶಿಗಳಾಗಿ ಮುಹಮ್ಮದ್ ಸಾಹಿಲ್, ಉನೈಸ್ ಕರಂದಾಡಿ, ಕೋಶಾಧಿಕಾರಿಯಾಗಿ ನೌಶಾದ್ ಮಜೂರು ಅವರನ್ನೊಳಗೊಂಡ ಒಟ್ಟು 17 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಯಿತು.
ಮುಖ್ಯ ಆಹ್ವಾನಿತರಾಗಿ ಎಸ್‌ವೈಎಸ್ ಮಜೂರು ಬ್ರಾಂಚ್ ಉಪಾಧ್ಯಕ್ಷ ಜಮಾಲುದ್ದೀನ್ ಚಂದ್ರನಗರ, ಪ್ರತಿಭೋತ್ಸವ ರಾಜ್ಯ ಪ್ರತಿಭೆ ಆದಿಲ್ ಉಚ್ಚಿಲ, ಕೊಂಬಗುಡ್ಡೆ ಶಾಖಾ ಕಾರ್ಯದರ್ಶಿ ಫೈಝಲ್ ಕೊಂಬಗುಡ್ಡೆ, ಎಸ್‌ವೈಎಸ್ ಸದಸ್ಯ ಉಮರ್ ಮಲ್ಲಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಹಾಸಭೆಯನ್ನು ಶಾಖಾ ಅಧ್ಯಕ್ಷ ಸ್ವಾಗತಿಸಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಕಾರ್ಯದರ್ಶಿ ವಂದಿಸಿದರು.







