ವಾರಿಸು ಇಲ್ಲದ ಕಾರು ಪೊಲೀಸರ ವಶಕ್ಕೆ

ಕಾಪು, ಜ.24 : ವಾರಿಸುದಾರರಿಲ್ಲದ ಬೆಂಗಳೂರು ನೊಂದಣಿಯ ಕೆ.ಎ.05ಎಂ.ಡಿ9915 ನಂಬ್ರದ ಕಾರೊಂದು ಪಡುಬಿದ್ರಿ ಕಾರ್ಕಳ ರಸ್ತೆಯಲ್ಲಿ ಪತ್ತೆಯಾಗಿದೆ.
ಸುಮಾರು ಐದು ದಿನಗಳಿಂದ ಒಂದೇ ಸ್ಥಳದಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ಧಿ ತಿಳಿದ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನವನ್ನು ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ. ಕಾರಿನ ಒಳಗೆ ದೊರೆತ ಇನ್ಶೂರೆನ್ಸ್ ಪ್ರತಿಯ ಪ್ರಕಾರ ಕಾರು ಬೆಂಗಳೂರು ವಿದ್ಯಾರನ್ಯಪುರದ ಮಹಿಳೆಯೋರ್ವರ ಹೆಸರಿನಲ್ಲಿದ್ದು , ನಿಖರವಾದ ಮಾಹಿತಿ ಇನ್ನಷ್ಟೇ ದೊರಕಬೇಕಾಗಿದೆ.
Next Story





