ಜಯಕೀರ್ತಿ ಜೈನ್‌ಗೆ ಸರ್ವೋತ್ತಮ ಸೇವಾ ಪ್ರಶಸ್ತಿ

ಬೆಳ್ತಂಗಡಿ , ಜ.24 : ಪಶುವೈದ್ಯಕೀಯ, ಸಾಮಾಜಿಕ, ಆರೋಗ್ಯ, ಸಹಕಾರಿ ರಂಗ ಇನ್ನಿತರ ಸೇವೆಗಳಲ್ಲಿ ಸಾಧಿಸಿದ ಸಾಧನೆಗಳನ್ನು ಗುರುತಿಸಿ ರಾಜ್ಯ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ಸರ್ವೋತ್ತಮ ಸೇವಾ ಪ್ರಶಸ್ತಿ ಧರ್ಮಸ್ಥಳ ಪಶು ಸಂಗೋಪನಾ ಅಧಿಕಾರಿ ಕೆ. ಜಯಕೀರ್ತಿ ಜೈನ್ ಅವರಿಗೆ ಲಭಿಸಿದೆ.
ಜ. 26 ರಂದು ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮದಂದು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಪ್ರಸ್ತುತ ಇವರು ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ, ಬೆಳ್ತಂಗಡಿ ಸರಕಾರಿ ನೌಕಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪಶುವೈದ್ಯಕೀಯ ಪರಿವೀಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷರಾಗಿ, ಮಹಾವೀರ ಕೋ. ಓ. ಸೊಸೈಟಿಯ ಜಿಲ್ಲಾ ನಿರ್ದೇಶಕರಾಗಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story





