ಮಂಗಳೂರಿನ ವೀಡಿಯೋ ಅಡ್ಡೆಗೆ ದಾಳಿ : 14 ಆರೋಪಿಗಳ ಬಂಧನ
ಮಂಗಳೂರು , ಜ. 24 : ವೀಡಿಯೋ ಅಡ್ಡೆಗೆ ದಾಳಿ ಮಾಡಿದ ಮಂಗಳೂರು ಸಿಸಿಬಿ ಪೊಲೀಸರ ತಂಡ ನಗದು, ಸೊತ್ತುಗಳ ಸಹಿತ 14 ಮಂದಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳನ್ನು ಸುಶಾಂತ್ ಬಂಗೇರ (24) , ಸಂದೇಶ್ (25) , ದಾಸಪ್ಪ (30), ಪ್ರಶಾಂತ (31), ರಾಹುಲ್ (23), ಶಿವಾನಂದ (30), ಇಬ್ರಾಹಿಂ (46) , ಪವನ್ ಕುಮಾರ್ (24), ಮುಸ್ತಾಫ (22), ಮುಹಮ್ಮದ್ ಇಕ್ಬಾಲ್ (30), ವಸಂತ ಕುಮಾರ್ (34), ಹರ್ಷಿತ್ (25) ಪ್ರಕಾಶನ್ (30) , ಅಕ್ಬರ್, (45) ಎಂದು ಗುರುತಿಸಲಾಗಿದೆ.
ಮಂಗಳೂರು ಪಂಪ್ ವೆಲ್ ನ ಮಾನಸ ರಿಕ್ರಿಯೇಶನ್ ಕ್ಲಬ್ ಗೆ ದಾಳಿ ಮಾಡಿದ ಸಿಸಿಬಿ ತಂಡ ಬಂಧಿತರಿಂದ ರೂ. 1.15 ಲಕ್ಷ ರೂ./- ನಗದು ಹಾಗೂ ಜೂಜಾಟಕ್ಕೆ ಬಳಸಿದ 3 ವೀಡಿಯೋ ಗೇಮ್ ಮೆಶಿನ್ ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಸುನೀಲ್ ವೈ,ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
Next Story





