ಶಿವಮೊಗ್ಗ: ನಾಗರಹಾವಿಗೆ ಆರು ನಾಯಿ ಮರಿಗಳು ಬಲಿ!
ಶಿವಮೊಗ್ಗ, ಜ.24: ನಾಗರಹಾವಿನ ರೋಷಾವೇಶಕ್ಕೆ ಇತ್ತೀಚೆಗೆ ಆರು ನಾಯಿ ಮರಿಗಳು ನಾಗರಹಾವಿಗೆ ಬಲಿಯಾಗಿರುವ ಘಟನೆ ನಗರದ ಮಾಡರ್ನ್ ಚಿತ್ರಮಂದಿರ ಹಿಂಭಾಗದ ಮನೆಯೊಂದರ ಸಮೀಪ ಮಂಗಳವಾರ ವರದಿಯಾಗಿದೆ. ನಾಯಿ ಮರಿಗಳನ್ನು ಕಚ್ಚಿ ಸಾಯಿಸಿದ ನಾಗರಹಾವು, ಬಳಿಕ ಗಿಡಪೊದೆಗಳಲ್ಲಿ ಕಣ್ಮರೆಯಾಗಿದೆ.
ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ಕಿರಣ್ ನಾಗರಹಾವಿಗಾಗಿ ಶೋಧ ನಡೆಸಿದರು. ಆದರೆ ಹಾವು ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸ್ನೇಕ್ ಕಿರಣ್ ಬರಿಗೈಯಲ್ಲಿ ಹಿಂದಿರುಗುವಂತಾಯಿತು.
Next Story





