ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ
ಪುತ್ತೂರು, ಜ.24: ವೃದ್ಧೆ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ನಗರದ ಹೊರವಲಯದಲ್ಲಿರುವ ಬನ್ನೂರು ಗ್ರಾಮದ ಬನ್ನೂರು ಕಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬನ್ನೂರು ಕಟ್ಟೆ ನಿವಾಸಿ ಮೀರಾ ಬಾಯಿ(80) ಎಂದು ಗುರುತಿಸಲಾಗಿದೆ.
ಮೀರಾ ಬಾಯಿ ಸೋಮವಾರ ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪುತ್ರ ಅರುಣ್ ಕುಮಾರ್ ನಗರದ ಟೌನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದರು. ಅವರ ಪತ್ನಿ ಜಯಂತಿ ಅತ್ತೆ ವಿಲಾಸಿನಿ ಜೊತೆ ವೈದ್ಯರಲ್ಲಿಗೆ ತೆರಳಿದ್ದರು. ಜಯಂತಿ ಮನೆಗೆ ಮರಳಿದ ಬಳಿಕ ಈ ಪ್ರಕರಣ ತಿಳಿದು ಬಂದಿದೆ.
Next Story





