ಮೊಖ ನಗರ ವಶಪಡಿಸಿಕೊಂಡ ಯಮನ್ ಸರಕಾರಿ ಪಡೆಗಳು
ಆ್ಯಡನ್, ಜ. 24: ಕೊಲ್ಲಿ ಅರಬ್ ದೇಶಗಳ ಬೆಂಬಲ ಪಡೆದ ಯಮನ್ ಪಡೆಗಳು ಸೋಮವಾರ ಹೌದಿ ಬಂಡುಕೋರರನ್ನು ಹಿಮ್ಮೆಟ್ಟಿಸಿ ಕೆಂಪು ಸಮುದ್ರದ ಕರಾವಳಿ ನಗರ ಅಲ್-ಮೊಖವನ್ನು ಪ್ರವೇಶಿಸಿದವು ಎಂದು ಸೇನಾ ಅಧಿಕಾರಿಗಳು ಹೇಳಿದರು.
ಯಮನ್‌ನಲ್ಲಿ ಎರಡು ವರ್ಷಗಳ ಆಂತರಿಕ ಯುದ್ಧ ಆರಂಭಗೊಂಡಿದ್ದು, ಸರಕಾರದ ಪರವಾಗಿ ಸೌದಿ ಅರೇಬಿಯ ನೇತೃತ್ವದಲ್ಲಿ ಮಿತ್ರ ಪಡೆಗಳು ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ.
ಮನ್ಸೂರ್ ಹದಿ ಸರಕಾರಕ್ಕೆ ನಿಷ್ಠವಾಗಿರುವ ಪಡೆಗಳು ಮೊಖ ನಗರದ ನೈರುತ್ಯ ತುದಿಯನ್ನು ತಲುಪಿವೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದರು.
Next Story





