ಕಂಬಳ ಪರ ‘ಪೋಸ್ಟ್ ಕಾರ್ಡ್’ ಚಳವಳಿ
ಮಂಗಳೂರು, ಜ.24: ತುಳುನಾಡಿನ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕಲೆಯಾದ ಕಂಬಳವನ್ನು ನಡೆಸಲು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕ ಬೆಂಬಲ ನೀಡಲಿದ್ದು, ‘ಕಂಬಳ ನಡಪಾಲೆ ಕಂಬಳ ಒರಿಪಾಲೆ’ ಅಭಿಯಾನದ ಅಂಗವಾಗಿ ‘ಪೋಸ್ಟ್ ಕಾರ್ಡ್’ ಚಳವಳಿ ನಡೆಸಲಾಗುವುದು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ವಕ್ತಾರ ಧರ್ಮೇಂದ್ರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಸರಕಾರ ಕೂಡಲೇ ಎಚ್ಚೆತ್ತು ತುಳುನಾಡಿನ ಕಂಬಳ ಕ್ರೀಡೆಯ ಕುರಿತು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧದ ಬಗ್ಗೆ ಆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಈ ರಾಜ್ಯದಲ್ಲೂ ಆವರ್ತಿಸಬೇಕಾದೀತು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಲೋಹಿತ್‌ಕುಮಾರ್ ಸುವರ್ಣ, ವಿನಾಯಕ್ ನಾಯಕ್, ಸಮರ್ಥ್ ಭಟ್, ರತೀಶ್ ಮೊದಲಾದವರು ಉಪಸ್ಥಿತರಿದ್ದರು.
Next Story





