ವಿಚಿತ್ರ ರೂಪದ ಶಿಶು ಜನನ
ತಾನುಹೆತ್ತ ಮಗುವನ್ನೇ ಮುಟ್ಟಲು ಹಿಂಜರಿಯುವ ತಾಯಿ !

ಪಾಟ್ನ, ಜ.25: ತಾನೇಹೆತ್ತ ಮಗುವನ್ನು ಮುಟ್ಟುವುದಕ್ಕೂ ಅಮ್ಮ ಹೆದರಿದ ಘಟನೆ ನಡೆದಿದೆ. ಅದರತ್ತ ಮುಖವೆತ್ತಿ ನೋಡಲು ಕೂಡಾ ಮಗುವಿನ ತಂದೆ ಮತ್ತು ಕುಟುಂಬ ಸಿದ್ಧವಿಲ್ಲ. ದೇವಕೋಪವೆಂದು ಊರವರು ದಂಪತಿಯನ್ನು ಶಪಿಸುತ್ತಿದ್ದಾರೆ.
ಪಾಟ್ನದ ಸರಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ರೂಪದ ಶಿಶುಜನನ ಆಗಿದೆ. ಈ ಶಿಶುವಿನ ತಂದೆ ತಾಯಿ ಹೆಸರನ್ನು ಗೋಪ್ಯವಾಗಿರಿಸಲಾಗಿದೆ. ಹುಟ್ಟಿದ ಹೆಣ್ಣುಮಗು ಮನುಷ್ಯ ರೂಪದಲ್ಲಿಲ್ಲ. ಅದರ ವಿಚಿತ್ರ ರೂಪ ಯಾರನ್ನೂ ಹೆದರಿಸುವಂತಿದೆ ಎಂದು ವರದಿಯೊಂದು ತಿಳಿಸಿದೆ.
ಹೆತ್ತಮಗುವಿಗೆ ತಾಯಿ ಹಾಲುಣಿಸಲು ಕೂಡಾ ಸಿದ್ಧಳಿಲ್ಲ. ಅದನ್ನು ಮನೆಗೆ ಕೊಂಡುಹೋಗಲು ಅದರ ತಂದೆತಾಯಿ ಒಪ್ಪಲಿಲ್ಲ. ಕೊನೆಗೆ ಸಂಬಂಧಿಕರ ಒತ್ತಾಯಕ್ಕೆ ಮಣಿದು ಮನೆಗೆ ಕರೆತಂದರೂ ಅದಕ್ಕೆ ಎದೆಹಾಲು ನೀಡಲು ಹೆತ್ತಮ್ಮನೇ ನಿರಾಕರಿಸಿದ್ದಾಳೆ. ತನಗೆ ಇಂತಹ ಮಗು ಹುಟ್ಟುತ್ತದೆಯೆಂದು ಗೊತ್ತಿರಲಿಲ್ಲ ಎಂದು ಅಮ್ಮ ರೋಧಿಸುತ್ತಿದ್ದಾಳೆ. ತಿಂಗಳು ಪೂರ್ತಿಯಾಗದೆ ಹೆರಿಗೆಯಾದರೆ ಮಗು ಹೆಚ್ಚು ದಿವಸ ಬದುಕುವುದಿಲ್ಲ. ಶಿಶುವಿನ ಆಂತರಿಕ ಅವಯವಗಳು ಸಂಪೂರ್ಣ ಬೆಳವಣಿಗೆಗೊಂಡಿಲ್ಲ. ಗರ್ಭಿಣಿಯರಿಗೆ ಪೋಷಕಾಂಶಗಳ ಆಹಾರದ ಕೊರತೆಯಾಗಿದ್ದರೆ ಇಂತಹ ಶಿಶು ಜನಿಸುತ್ತವೆ ಎಂದು ವೈದ್ಯರು ಹೇಳುತ್ತಾರೆಂದು ವರದಿ ತಿಳಿಸಿದೆ.





