ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾಗಿ ಮುಹಮ್ಮದ್ ನವಾಝ್

ಮಂಗಳೂರು, ಜ.25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಇದರ ವಾರ್ಷಿಕ ಸಭೆ ಝೀನತ್ ಬಕ್ಷ್ ಯತೀಂ ಖಾನ ಸಭಾಂಗಣದಲ್ಲಿ ಜ.24ರಂದು ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಆಗಿ ಮೊಹಮ್ಮದ್ ನವಾಝ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ದ ಖಾದರ್ ಆಯ್ಕೆಗೊಂಡರು.
ಜಿಲ್ಲೆಯ 2016ನೆ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಲಾಯಿತು. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, ನಿರ್ಗಮನ ಅಧ್ಯಕ್ಷ ಮುಹಮ್ಮದ್ ಹನೀಫ್, ಹಾಗೂ ಕಾರ್ಯದರ್ಶಿ ಶರೀಫ್ ಉಪಸ್ಥಿತರಿದ್ದರು.
Next Story





