ಕೇರಳ: ಫೆ.6ರ ವರೆಗೆ ಹಜ್ ಅರ್ಜಿ ಸ್ವೀಕಾರ

ಕೊಂಡೊಟ್ಟಿ,ಜ.25: ರಾಜ್ಯದ ಹಜ್ ಕಮಿಟಿ ಮೂಲಕ ಈ ವರ್ಷದ ಹಜ್‌ಯಾತ್ರೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಹಜ್ ಯಾತ್ರೆ ಬಯಸುವವರು ಫೆಬ್ರವರಿ ಆರರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಸಿಸ್ಟೆಂಟ್ ಸೆಕ್ರಟರಿಟಿ.ಕೆ.ಅಬ್ದುರ್ರಹ್ಮಾನ್ ತಿಳಿಸಿದ್ದಾರೆ. ಈ ಹಿಂದೆ ಜನವರಿ 24 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವೆಂದು ಹಜ್‌ಕಮಿಟಿ ಘೋಷಿಸಿತ್ತು.
ಬೇರೆ ಬೇರೆರಾಜ್ಯಗಳ ಹಜ್ ಕಮಿಟಿಯ ಆಗ್ರಹದಂತೆ ಕೇಂದ್ರ ಹಜ್ ಕಮಿಟಿ ಅರ್ಜಿಸ್ವೀಕಾರದ ದಿನಾಂಕವನ್ನು ಮುಂದೂಡಿದೆ. ಕರಿಪ್ಪೂರ್ ಹಜ್ ಹೌಸ್‌ನಲ್ಲಿಅರ್ಜಿ ಸಲಿಸಲು ಮಂಗಳವಾರ ಹೆಚ್ಚುಮಂದಿ ಬಂದಿದ್ದರು. ಮಂಗಳವಾರ 5,000 ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಇದರೊಂದಿಗೆ ಈಸಲ ಹಜ್ ಯಾತ್ರೆ ಬಯಸುವವರ ಸಂಖ್ಯೆ 58,726ಕ್ಕೇರಿದೆ ಎಂದು ವರದಿತಿಳಿಸಿದೆ.
Next Story





