ಪಿ.ಎ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾರ್ಯಗಾರ

ಮಂಗಳೂರು, ಜ.25: ಪಿ.ಎ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ವಿಭಾಗದ ವತಿಯಿಂದ ನೀರಿನ ಅಭಾವ ಮತ್ತು ನಿರ್ವಹಣೆ ಕುರಿತು ಪ್ರಾಂಶುಪಾಲ ಪ್ರೊ.ಕೆ. ಪಿ ಸೂಫಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಪಾಲಾಕ್ಷಪ ಮಾತನಾಡಿ, ನೀರಿನ ಉಪಯೋಗ, ಅಭಾವ ಹಾಗೂ ಅದರ ನಿರ್ವಹಣೆಯ ಕುರಿತು ಸಮಗ್ರವಾಗಿ ವಿವರಿಸಿದರು.
ಪ್ರಾಧ್ಯಾಪಕರಾದ ಮರ್ಝೂಕ್ ಅಹ್ಮದ್ ರವರು ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು. ಪ್ರಾಂಶುಪಾಲ ಪ್ರೊ. ಕೆ. ಪಿ ಸೂಫಿ ರವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ಅಲಿ ಅಶ್ರಫ್ ಹಾಗೂ ಡಾ. ಆ್ಯಂಟನಿ ಎ.ಜೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಮಿನ್ಹಾಜ್ ಅಹಮದ್ ಕಾರ್ಯಕ್ರಮದ ನಿರೂಪಿಸಿ ಅಥಿತಿಗಳನ್ನು ಸ್ವಾಗತಿಸಿದರು. ಪ್ರಾಧ್ಯಾಪಕ ಮಹಮ್ಮದ್ ಅಝರುದ್ದೀನ್ ಧನ್ಯವಾದ ಸಮರ್ಪಿಸಿದರು.
Next Story





