ಗಣರಾಜ್ಯೋತ್ಸವ: ರಾಷ್ಟ್ರಪತಿ ಪದಕಗಳಿಂದ ವಂಚಿತರಾದ ಕೇರಳ ಪೊಲೀಸರು !

ತಿರುವನಂತಪುರಂ,ಜ.25: ಗಣರಾಜ್ಯೋತ್ಸವ ದಿನದಲ್ಲಿ ಘೋಷಿಸುವ ರಾಷ್ಟ್ರಪತಿ ವಿಶಿಷ್ಟ ಸೇವಾ ಪುರಸ್ಕಾರ ಪಟ್ಟಿಯಲ್ಲಿ ಈ ಸಲ ಕೇರಳಕ್ಕೆ ಸ್ಥಾನವಿಲ್ಲ. ಇದಕ್ಕೆ ಸಂಬಂಧಪಟ್ಟ ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ (www.mha.nic.in) ಕಳೆದ ದಿವಸ ಪ್ರಕಟವಾದ ಪಟ್ಟಿಯಲ್ಲಿ ಕೇರಳದ ಪೊಲೀಸರಿಗೆ ಪದಕ ಇರುವ ಬಗ್ಗೆ ವಿವರಗಳಿಲ್ಲ ಎಂದು ವರದಿಯಾಗಿದೆ.
ಕೇರಳದಿಂದ ಕೇಂದ್ರಕ್ಕೆ ಪಟ್ಟಿಕಳುಹಿಸಲು ತಡವಾಗಿದ್ದು ಸಮಸ್ಯೆಗೆ ಕಾರಣವೆಂದು ಹೇಳಲಾಗಿದೆ. ಪದಕಕ್ಕೆ ಪರಿಗಣಿಸಬೇಕಾದ ಅಧಿಕಾರಿಗಳ ಪಟ್ಟಿ ಸೆಪ್ಟಂಬರ್ 28 ಕ್ಕೆ ಮೊದಲು ಕಳುಹಿಸಬೇಕೆಂದು ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ಆಗ್ರಹಿಸಿತ್ತು. ಅಕ್ಟೋಬರ್ 28ಕ್ಕೆ ಪುನಃ ಎಲ್ಲರಾಜ್ಯಗಳ ಗೃಹ ಕಾರ್ಯದರ್ಶಿಗೆ ಕೇಂದ್ರಸರಕಾರ ಪತ್ರ ಬರೆದಿತ್ತು. ಕೆಲವು ರಾಜ್ಯಗಳು ಪಟ್ಟಿ ಕಳುಹಿಸಿಲ್ಲ ಇದು ನವೆಂಬರ್ 15ಕ್ಕಿಂತ ಮೊದಲು ತಲುಪಿಸಬೇಕೆಂದು ಪತ್ರದಲ್ಲಿವಿವರಿಸಲಾಗಿತ್ತು. ಜನವರಿ 11ಕ್ಕೆ ರಾಜ್ಯಸರಕಾರಗಳು ಕಳುಹಿಸಿದ್ದ ಪಟ್ಟಿಯ ಅಂತಿಮ ಪರಿಶೀಲನೆಯನ್ನು ಕೇಂದ್ರ ನಡೆಸಿತ್ತು. ಇದರ ಮುಂಚಿನ ದಿನ ಕೇರಳದಿಂದ ಪಟ್ಟಿ ಬಂದಿತ್ತು ಎಂದು ಗೃಹಸಚಿವಾಲಯದ ಮೂಲಗಳು ತಿಳಿಸಿವೆ. ಕೇರಳ ಮಾತ್ರವಲ್ಲ ಅರುಣಾಚಲ, ಗೋವಾ, ನಾಗಲ್ಯಾಂಡ್‌ನಿಂದ ಲೂ ಪಟ್ಟಿ ಕೇಂದ್ರಕ್ಕೆ ತಲುಪಿಲ್ಲ. ಆದ್ದರಿಂದ ಇಲ್ಲಿನ ಪೊಲೀಸಧಿಕಾರಿಗಳಿಗೂ ರಾಷ್ಟ್ರಪತಿಗಳ ಪದಕ ದೊರೆಯುವುದಿಲ್ಲ ಎಂದು ವರದಿತಿಳಿಸಿದೆ.





