ರಾಜ್ಯದ ಇಬ್ಬರು ಸೇರಿದಂತೆ 36 ಜನರಿಗೆ ಜೀವನ ರಕ್ಷಾ ಪದಕ
ಹೊಸದಿಲ್ಲಿ,ಜ.25: ಬೇರೊಬ್ಬರ ಜೀವವನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಕ್ಕಾಗಿ ಕರ್ನಾಟಕದ ಇಬ್ಬರು ಸೇರಿದಂತೆ ದೇಶಾದ್ಯಂತದ 36 ಜನರನ್ನು ಜೀವನ ರಕ್ಷಾ ಪದಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮರಣೋತ್ತರವಾಗಿಯೂ ನೀಡಲಾಗಿರುವ ಪ್ರಶಸ್ತಿಗಾಗಿ ಸರ್ವೋತ್ತಮ ಜೀವನ ರಕ್ಷಾ ಪದಕ, ಉತ್ತಮ ಜೀವನ ರಕ್ಷಾ ಪದಕ ಮತ್ತು ಜೀವನ ರಕ್ಷಾ ಪದಕ ಹೀಗೆ ಮೂರು ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದೆ.
ಕರ್ನಾಟಕದ ಶಿಶಿರ ಕುಮಾರ್ ಮತ್ತು ರಾಕೇಶ ಕುಮಾರ್ ಸಿ.ಎನ್.ಅವರು ಸರ್ವೋತ್ತಮ ಜೀವನ ರಕ್ಷಾ ಪದಕ(ಮರಣೋತ್ತರ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪದಕಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಕೇರಳ(ತಲಾ ಐವರು) ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಮಿರೆರಾಂ,ಮಹಾರಾಷ್ಟ್ರ ಮತ್ತು ಪ.ಬಂಗಾಳ(ತಲಾ ನಾಲ್ವರು) ಹಾಗೂ ಕರ್ನಾಟಕ ಮತ್ತು ಛತ್ತೀಸ್‌ಗಡ (ತಲಾ ಇಬ್ಬರು) ಇವೆ.
ಅಸ್ಸಾಂ,ಮೇಘಾಲಯ,ಮಣಿಪುರ,ಒಡಿಶಾ,ಹರ್ಯಾಣ,ಹಿಮಾಚಲ ಪ್ರದೇಶ, ತಮಿಳುನಾಡು, ತೆಲಂಗಾಣ,ಸಿಕ್ಕಿಂ ಮತ್ತು ಜಮ್ಮ-ಕಾಶ್ಮೀರದ ತಲಾ ಓರ್ವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Next Story





