ಉಸೇನ್ ಬೋಲ್ಟ್ ರ ಒಲಿಂಪಿಕ್ಸ್ ಚಿನ್ನ ಕಿತ್ತುಕೊಂಡ ಐಒಸಿ !
ಕಾರಣ ಏನು ?

ಲೌಸನ್ನೆ, ಜ.25: ಒಂಬತ್ತು ಒಲಿಂಪಿಕ್ಸ್ ಚಿನ್ನ ಜಯಿಸಿರುವ ಶರವೇಗದ ಸರದಾರ ಉಸೇನ್ ಬೋಲ್ಟ್ ತನ್ನ ಜಮೈಕಾ ರಿಲೇ ತಂಡದ ನೆಸ್ಟ ಕಾರ್ಟರ್ ಅವರು ಡೋಪಿಂಗ್ ನಲ್ಲಿ ಸಿಕ್ಕಿ ಬಿದ್ದಿರುವ ಹಿನ್ನೆಲೆಯಲ್ಲಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 4x100 ರಿಲೇಯಲ್ಲಿ ಪಡೆದಿರುವ ಚಿನ್ನವನ್ನು ಕಳೆದುಕೊಳ್ಳಲಿದ್ದಾರೆ.
ಬೋಲ್ಟ್ ಈ ತನಕ ಪಡೆದಿರುವ 9 ಪದಕಗಳ ಪೈಕಿ 1 ಪದಕ ನಷ್ಟವಾಗಲಿದೆ. ಬೀಜಿಂಗ್ ಒಲಿಂಪಿಕ್ಸ್‌ನ ವೇಳೆ ಪಡೆದಿರುವ ಸ್ಯಾಂಪಲ್‌ನ ವರದಿಯಲ್ಲಿ ಬೋಲ್ಟ್ ಅವರ ಜಮೈಕಾ ತಂಡದ ಕಾರ್ಟರ್ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ.
ಬೋಲ್ಟ್ ಅವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 100ಮೀಟರ್, 200 ಮೀಟರ್ ಮತ್ತು 4x100 ಮೀಟರ್ ರಿಲೇಯಲ್ಲಿ ಚಿನ್ನ ಪಡೆದಿದ್ದರು. 2012ರ ಲಂಡನ್ ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ತಲಾ ಮೂರು ಚಿನ್ನ ಪಡೆದಿದ್ದರು.
ಈ ಪೈಕಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಾರ್ಟರ್ ಜೊತೆ ರಿಲೇಯಲ್ಲಿ ಪಡೆದ ಪದಕವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ ಹಿಂದಿರುಗಿಸುವಂತಾಗಿದೆ.
Next Story





