ಇರಾ ಶಾಲಾ ಮೈದಾನದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ-2017 ಉದ್ಘಾಟನೆ
ಕೊಣಾಜೆ , ಜ.25 : ನಾವು ದೇಶದಲ್ಲಿದ್ದಂತಹ ಸಾಮಾಜಿಕ ಇತಿಹಾಸವನ್ನು ಅರಿಯುವ ಕೆಲಸ ಮಾಡಬೇಕಾಗಿದೆ. ಆದರೆ ಇಂದಿನ ವರ್ತಮಾನ ಕಾಲದಲ್ಲಿ ಇತಿಹಾಸವನ್ನು ಮರೆತಿರುವುದೇ ಒಂದು ಸಮಸ್ಯೆಯಾಗಿದೆ. ಅಗರ್ಭ ಶ್ರೀಮಂತರಾಗಿದ್ದ ಜವಹಾರಲಾಲ್ ನೆಹರೂ ಅವರು ದೇಶಕ್ಕಾಗಿ ತ್ಯಾಗ ಮಾಡಿದವರು. ಅವರ ಕುಟುಂಬವೇ ದೇಶಕ್ಕಾಗಿ ಹೋರಾಡಿದೆ. ಹಾಗೆಯೇ ಇಂದಿರಾಗಾಂಧಿಯವರು ಭಾರತ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ನೇರವಾಗಿ ಅಧಿಕಾರಕ್ಕೆ ಬಂದವರಲ್ಲ ಅವರು ಚುನಾಯಿತರಾಗಿ ಪ್ರಧಾನಿ ಅಭ್ಯರ್ಥಿ ಆಗುವುದರೊಂದಿಗೆ ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಸಮಾಜದ ಅಭಿವೃದ್ದಿಗಾಗಿ ಪಣತೊಟ್ಟಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.
ಇರಾ ವಲಯ ಹಾಗೂ ಇರಾ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಇಂದಿರಾಗಾಂಧಿ ಜನ್ಮ ಶತಾಬ್ಧಿ ವರ್ಷಾಚರಣೆ ಪ್ರಯುಕ್ತ ಇರಾ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬುಧವಾರ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾಟ ಪ್ರಿಯದರ್ಶಿನಿ ಟ್ರೋಫಿ-2017 ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ಇರಾ ಎಂಬ ಮಾದರಿ ಗ್ರಾಮದಲ್ಲಿ ಎಲ್ಲಾ ಪರಿಸರದ ಕ್ರೀಡಾಪಟುಗಳಿಗೆ ಅವಕಾಶವನ್ನು ನೀಡಿ ಉತ್ತಮ ಕಬ್ಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವುದು ಮಾದರಿಯಾಗಿದೆ. ಅಮೇರಿಕಾದಲ್ಲಿ ಇನ್ನೂ ಕೂಡಾ ಮಹಿಳೆಯೊಬ್ಬರಿಗೆ ಅಧ್ಯಕ್ಷೆಯಾಗಲು ಅವಕಾಶ ಸಿಕ್ಕಿಲ್ಲ. ಆದರೆ ಭಾರತದಲ್ಲಿ ಅಂದಿನ ಕಾಲದಲ್ಲಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಂತಹ ಉನ್ನತ ಸ್ಥಾನವನ್ನು ಏರುವ ಮೂಲಕ ಭಾರತದ ಪ್ರಜಾಪ್ರಭುತ್ವದ ಮೌಲ್ಯವನ್ನು ತೋರಿಸಿಕೊಟ್ಟಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿಯವರು ಹಲವಾರು ಬದಲಾವಣೆಯ ಮೂಲಕ ದೇಶಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ದೇಶಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ನೆನಪಿಸುವ ಕೆಲಸ ಆಗಬೇಕಾಗಿದೆ.
ಅಂದಿನ ಕಾಲದಲ್ಲಿ ಪಾರ್ಲಿಮೆಂಟ್‌ನಲ್ಲಿ ಪ್ರಪಥಮವಾಗಿ ಗೋಮಸೂದೆ ಕಾಯ್ದೆಯನ್ನು ಜಾರಿಗೊಳಿಸಿದ ಪ್ರಥಮ ಪ್ರಧಾನಿಯಾಗಿದ್ದಾರೆ. ಈಗಿನವರು ಈ ಬಗ್ಗೆ ಒಂದು ಮಸೂದೆಯನ್ನು ಜಾರಿಗೊಳಿಸದಿದ್ದರೂ ಸಂಸತ್ತಿನ ಹೊರಗಡೆ ಮಾತನಾಡುವ ಉದ್ದೇಶವಾದರೂ ಏನು. ಇಂದಿರಾ ಗಾಂಧಿ ಅವರು ಸಾಧನೆಯ ಮೂಲಕ ಇಡೀ ವಿಶ್ವದಲ್ಲೇ ಅವರನ್ನು ಕಬ್ಬಿಣದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರನ್ನು ಗೌರವಿಸಲಾಯಿತು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ , ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಿವ್ಯಪ್ರಭಾ ಹೆಗ್ಡೆ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮಸ್ ಮೋನು, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ಮಮತಾ ಡಿ.ಎಸ್.ಗಟ್ಟಿ, ಮನಪಾ ಮಾಜಿ ಮೇಯರ್ ಅಶ್ರಫ್ ಕೆ, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಅಬ್ದುಲ್ ಖಾದರ್, ಕುರ್ನಾಡ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಶಾಂತ ಕಾಜವ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಎಸ್.ಕರೀಂ, ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್, ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ, ಕೆಎಸ್‌ಆರ್‌ಟಿಸಿ ನಿರ್ದೇಶಕ ಮುಖಂಡ ಟಿ.ಕೆ.ಸುಧೀರ್, ಬಂಟ್ವಾಳ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಪಟ್ಟೋರಿ, ಉದ್ಯಮಿ ಇಬ್ರಾಹಿಂ ನಡುಪದವು, ಬಂಟ್ವಾಳ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ಎಸ್‌ಸಿ ಘಟಕಾಧ್ಯಕ್ಷ ಪದ್ಮನಾಭ ನರಿಂಗಾನ, ಶಮೀರ್ ಪಜೀರ್, ತನಿಯಪ್ಪ ಬೆಳ್ಚಾಡ ಇನ್ನಿತರರು ಉಪಸ್ಥಿತರಿದ್ದರು.
ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿದರು. ವಿದ್ಯಾರ್ಥಿ ಚಿನ್ಮಯಿ ಪ್ರಾರ್ಥಿಸಿದರು. ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.







