ರೈಲ್ವೆ ಆಸ್ತಿಗೆ ಹಾನಿ: 150 ಜನರ ವಿರುದ್ಧ ಪ್ರಕರಣ
ಕೊಯಮತ್ತೂರು,ಜ.25: ಸೇಲಮ್‌ನಲ್ಲಿ ಬೆಂಗಳೂರು-ಕಾರೈಕಲ್ ಪ್ಯಾಸೆಂಜರ್ ರೈಲಿನ ಇಂಜಿನ್ ಮತ್ತು ಬೋಗಿಗಳಿಗೆ ಹಾನಿಯನ್ನುಂಟು ಮಾಡಿದ ಆರೋಪದಲ್ಲಿ 150 ಜನರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜಲ್ಲಿಕಟ್ಟು ನಿಷೇಧದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದ ಆರೋಪಿಗಳು ಜ.19ರಿಂದ ಐದು ದಿನಗಳ ಕಾಲ ಈ ರೈಲನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು.
16 ಬೋಗಿಗಳ ರೈಲನ್ನು ಜ.23ರಂದು ಪೊಲೀಸರ ನೆರವಿನೊಂದಿಗೆ ಮರುವಶ ಮಾಡಿಕೊಳ್ಳಲಾಗಿದ್ದು, ಸುಮಾರು 60 ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ.
ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಸೇಲಂ ನಗರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
Next Story





