ಕೇರಳದಲ್ಲಿ ಮಹಿಳಾ ಬೆಟಾಲಿಯನ್ ಅಸ್ತಿತ್ವಕ್ಕೆ
ತಿರುವನಂತಪುರಂ, ಜ.25: ಕೇರಳದಲ್ಲಿ ಶೀಘ್ರ ಮಹಿಳಾ ಬೆಟಾಲಿಯನ್ ಅಸ್ತಿತ್ವಕ್ಕೆ ಬರ ಲಿದ್ದು ಕಣ್ಣೂರು ಅಥವಾ ತಿರುವನಂತಪುರಂನಲ್ಲಿ ಇದರ ಕೇಂದ್ರ ಕಚೇರಿ ಇರುತ್ತದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. 20 ಮಹಿಳಾ ಪೊಲೀಸ್ ಹವಿಲ್ದಾರ್, 380 ಕಾನ್‌ಸ್ಟೆಬಲ್, 10 ತಾಂತ್ರಿಕ ಸಿಬ್ಬಂದಿಯನ್ನು ಈ ಬಟಾಲಿಯನ್ ಹೊಂದಿರುತ್ತದೆ. ರಾಜ್ಯದಲ್ಲಿ ಹಂತ ಹಂತವಾಗಿ ಮಹಿಳಾ ಪೊಲೀಸ್ ಬಲವನ್ನು ಶೇ.15ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಸಶಸ್ತ್ರ ಪಡೆಗಳ ವಿಭಾಗಕ್ಕೆ ಕ್ರೀಡಾ ಕೋಟಾದಡಿ 74 ಕ್ರೀಡಾಪಟುಗಳನ್ನು ನಿಯುಕ್ತಿಗೊಳಿಸಲು ನಿರ್ಧರಿಸಲಾಯಿತು ಎಂದು ಸರಕಾರದ ಮೂಲಗಳು ತಿಳಿಸಿವೆ.
Next Story





