ಪಕ್ಕಲಡ್ಕ ಮದ್ರಸದಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಮಂಗಳೂರು, ಜ.26: ಬಜಾಲ್ ಪಕ್ಕಲಡ್ಕ ಮುಹಿಯುದ್ದೀನ್ ಮದ್ರಸದಲ್ಲಿ ಎಸ್ಕೆಎಸ್‌ಬಿವಿ ವತಿಯಿಂದ ಗಣರಾಜ್ಯೋತ್ಸವ ಆಚರಣೆಯು ಇಂದು ಬೆಳಗ್ಗೆ 7:30ಕ್ಕೆ ಮದ್ರಸ ಪರಿಸರದಲ್ಲಿ ಜರಗಿತು.
ರಾಷ್ಟ್ರ ಧ್ವಜಾರೋಹಣವನ್ನು ಸ್ಥಳೀಯ ಖತೀಬ್ ನಝೀರ್ ಅಝ್‌ಹರಿ ಬೊಳ್ಮಿನಾರ್ ನೆರವೇರಿಸಿದರು. ಬಳಿಕ ಮಾತಾಡಿದ ಅವರು, ದೇಶದ ಐಕ್ಯ ಮತ್ತು ಅಭಿವೃದ್ಧಿಗಾಗಿ ನಾವೆಲ್ಲರು ಶ್ರಮಿಸಬೇಕು. ಕೋಮುವಾದ, ಉಗ್ರವಾದವನ್ನು ಸೋಲಿಸಿ ಶಾಂತಿಯುತ ಭಾರತಕ್ಕಾಗಿ ಪಣ ತೊಡಬೇಕು ಎಂದರು.
ಸದರ್ ಮುಅಲ್ಲಿಂ ರಫೀಕ್ ಮುಸ್ಲಿಯಾರ್ ಬೋಳಿಯಾರ್ ಮಾತನಾಡಿ, ದೇಶದ ಇತಿಹಾಸದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ಉಲ್ಲೇಖಿಸಿದರು.
ಮುಅಲ್ಲಿಂ ರಶೀದ್ ದಾರಿಮಿ ಉಪಸ್ಥಿತರಿದ್ದರು. ಎಸ್‌ಬಿವಿ ಕಾರ್ಯದರ್ಶಿ ಝಿಯಾದ್‌ಸ್ವಾಗತಿಸಿದರು. ಅಧ್ಯಕ್ಷ ಅಫ್ತಾಬ್ ವಂದಿಸಿದರು. ಆಶೀಶ್, ಫಯಾಝ್, ಸುಫೈದ್ ರಾಷ್ಟ್ರಗೀತೆ ಹಾಡಿದರು. ಕೊನೆಗೆ ಸಿಹಿತಿಂಡಿ ವಿತರಿಸಲಾಯಿತು.
Next Story





