ಅಮ್ಮೆಮಾರ್ ಬದ್ರಿಯಾ ಮದ್ರಸದಲ್ಲಿ ರಿಪಬ್ಲಿಕ್ ಡೇ

ಫರಂಗಿಪೇಟೆ, ಜ.26: ಬದ್ರಿಯಾ ಮದ್ರಸ ಅಮ್ಮೆಮಾರ್‌ನಲ್ಲಿ ರಿಪಬ್ಲಿಕ್ ಡೇ ಆಚರಿಸಲಾಯಿತು.
ಮಸೀದಿ ಕಮಿಟಿಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ. ಧ್ವಜಾರೋಹಣಗೈದರು. ಮುದರ್ರಿಸ್ ಅಬೂ ಸ್ವಾಲಿಹ್ ಫೈಝಿ ದುಆಗೈದರು. ಸದರ್ ಮುಅಲ್ಲಿಮ್ ಸಿದ್ದೀಕ್ ಮೌಲವಿ ಮಾತನಾಡಿದರು.
ಸಮಿತಿಯ ಸದಸ್ಯರಾದ ಸುಲೈಮಾನ್ ಉಸ್ತಾದ್, ಹಾರಿಸ್, ಮದ್ರಸ ಅಧ್ಯಾಪಕರಾದ ಸದರ್ ಮುಅಲ್ಲಿಮ್ ಸಿದ್ದೀಕ್ ಮೌಲವಿ, ಇಲ್ಯಾಸ್ ಮದನಿ, ಅಶ್ರಫ್ ಝೈನಿ, ಇಸ್ಹಾಕ್ ಅರ್ಶದಿ, ಅಬೂಬಕರ್ ಮದನಿ ಉಪಸ್ಥಿತರಿದ್ದರು.
Next Story





