ಇರಾ: ‘ಪ್ರಿಯದರ್ಶಿನಿ ಟ್ರೋಫಿ’ಗೆ ಚಾಲನೆ

ಕೊಣಾಜೆ, ಜ.26: ನಾವು ದೇಶದಲ್ಲಿ ದ್ದಂತಹ ಸಾಮಾಜಿಕ ಇತಿಹಾಸವನ್ನು ಅರಿಯುವ ಕೆಲಸ ಮಾಡಬೇಕಾಗಿದೆ. ಆದರೆ ಇಂದಿನ ವರ್ತಮಾನ ಕಾಲದಲ್ಲಿ ಇತಿಹಾಸವನ್ನು ಮರೆತಿರುವುದೇ ಒಂದು ಸಮಸ್ಯೆಯಾಗಿದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಬಿ.ರಮಾನಾಥ ರೈ ಅಭಿ ಪ್ರಾಯಪಟ್ಟರು. ಇರಾ ವಲಯ ಹಾಗೂ ಇರಾ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಇಂದಿರಾ ಗಾಂಧಿ ಜನ್ಮ ಶತಾಬ್ದಿ ವರ್ಷಾಚರಣೆ ಪ್ರಯುಕ್ತ ಇರಾ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬುಧವಾರ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾಟ ‘ಪ್ರಿಯದರ್ಶಿನಿ ಟ್ರೋಫಿ -2017’ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಚಿವ ಯು.ಟಿ.ಖಾದರ್ ಮಾತ ನಾಡಿ, ಇರಾ ಎಂಬ ಮಾದರಿ ಗ್ರಾಮ ದಲ್ಲಿ ಎಲ್ಲಾ ಪರಿಸರದ ಕ್ರೀಡಾಪಟುಗಳಿಗೆ ಅವಕಾಶವನ್ನು ನೀಡಿ ಉತ್ತಮ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವುದು ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರನ್ನು, ಕಾರ್ಯ ಕರ್ತರನ್ನು ಗೌರವಿಸಲಾಯಿತು.
ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಹೆಗ್ಡೆ ಚಿಲ್ತಡ್ಕ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಮಮತಾ ಡಿ.ಎಸ್.ಗಟ್ಟಿ, ಮಾಜಿ ಮೇಯರ್ ಅಶ್ರಫ್ ಕೆ., ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಅಬ್ದುಲ್ ಖಾದರ್, ಕುರ್ನಾಡ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಶಾಂತ ಕಾಜವ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ರಫೀಕ್, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಬಂಟ್ವಾಳ ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಾಧವ ಮಾವೆ, ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಪಟ್ಟೋರಿ, ಉದ್ಯಮಿ ಇಬ್ರಾಹೀಂ ನಡುಪದವು, ಬಂಟ್ವಾಳ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ಎಸ್ಸಿ ಘಟಕಾಧ್ಯಕ್ಷ ಪದ್ಮನಾಭ ನರಿಂಗಾನ ಮತ್ತಿತರರು ಉಪಸ್ಥಿತರಿದ್ದರು. ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿದರು. ವಿದ್ಯಾರ್ಥಿ ಚಿನ್ಮಯಿ ಪ್ರಾರ್ಥಿಸಿದರು. ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು.







