ಜೋಕಟ್ಟೆ ಅಂಜುಮಾನ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಮಂಗಳೂರು, ಜ.26: ಜೋಕಟ್ಟೆ ಅಂಜುಮಾನ್ ವಿದ್ಯಾಸಂಸ್ಥೆಯ ವತಿಯಿಂದ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕೋಸ್ಟಲ್ ಫಿಶರೀಸ್ ನ ಹಾಜಿ ಎಂ.ಅಬ್ದುಲ್ ರಶೀದ್ ಧ್ವಜಾರೋಹಣಗೈದರು.
ಇದೇ ಸಂದರ್ಭ ಅವರು ಕಾಲೇಜಿನ ನವೀಕೃತಗೊಂಡ ಶೌಚಾಲಯವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎ..ರಶೀದ್ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಸಂಚಾಲಕರಾದ ಹಾಜಿ ಮೂಸಬ್ಬ ಪಿ. ಬ್ಯಾರಿ, ಉಪ ಸಂಚಾಲಕರಾದ ಹಾಜಿ ಜೆ.ಮುಹಮ್ಮದ್ ಅಥಾವುಲ್ಲಾ, ಅಮೀರ್ ಬಾವಾ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಶಾಲಾ ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷ ರಶೀದ್, ಉಪಾಧ್ಯಕ್ಷೆ ಅಮಿತಾ, ಸಾಂಸ್ಕೃತಿಕ ಕಾರ್ಯದರ್ಶಿ ಶಾಹುಲ್ ಹಮೀದ್, ಸಲಹೆಗಾರ ಎಂ.ಪಿ.ಇಸ್ಮಾಯೀಲ್, ಅಂಜುಮಾನ್ ಯತೀಂಖಾನದ ಸಂಚಾಲಕ ಅಬ್ದುಲ್ ಖಾದರ್ ಗೋವಾ, ತಾಪಂ ಸದಸ್ಯ ಬಶೀರ್ ಅಹ್ಮದ್, ಹಳೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಶಾಲಾ ಪ್ರಾಂಶುಪಾಲೆ ಡಾ.ಶಾಂತಿ ವಿಜಯ, ಮುಖ್ಯೋಪಾಧ್ಯಾಯಿನಿ ಶುಭಾ ರವೀಂದ್ರ ಹಾಗೂ ಶಾಲಾಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ನಿಮ್ರಾ ಹಾಗೂ ಅಶೀಲಾ ಕಾರ್ಯಕ್ರಮ ನಿರೂಪಿಸಿದರು. ಹಫೀಲಾ ಕಾರ್ಯಕ್ರಮವನ್ನು ಸ್ವಾಗತಿಸಿದರು. ಅಖೀದಾ ವಂದಿಸಿದರು.





