ಮಮ್ಮುಟ್ಟಿ ಜೊತೆ ಸ್ಪರ್ಧೆ ಕುರಿತು ಮೋಹನಲಾಲ್ ಹೇಳುವುದೇನು ?
54 ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸೂಪರ್ ಸ್ಟಾರ್ ಗಳು
_0.jpg)
ತಿರುವನಂತಪುರಂ, ಜ.26: ''ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಜತೆ ತಾವು ಯಾವತ್ತೂ ಸ್ಪರ್ಧೆಯಲ್ಲಿರಲೇ ಇಲ್ಲ'' ಎಂದು ಇನ್ನೊಬ್ಬ ಸೂಪರ್ ಸ್ಟಾರ್ ಮೋಹನ್ ಲಾಲ್ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ ಮೋಹನ್‌ಲಾಲ್, ತಾವು ಮಮ್ಮುಟ್ಟಿ ಜತೆ 54 ಚಿತ್ರಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದೇನೆಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ತಮ್ಮಿಬ್ಬರ ನಡುವೆ ಯಾವತ್ತೂ ಯಾವುದೇ ವಿಧವಾದ -ಆರೋಗ್ಯಕರ ಅಥವಾ ಬೇರೆ ಯಾವುದೇ ರೀತಿಯ ಸ್ಪರ್ಧೆಯಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ, ತಾವಿಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಹಾದಿಯನ್ನು ಹಿಡಿದಿದ್ದೇವೆ. ಒಬ್ಬರಿಗೆ ಆಫರ್ ಮಾಡಲಾದ ಪಾತ್ರ ಇನ್ನೊಬ್ಬರು ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದರು.
ಇದೀಗ ತಾವಿಬ್ಬರೂ ಚಿತ್ರವೊಂದರಲ್ಲಿ ಜತೆಯಾಗಿ ಕಾಣಿಸಿಕೊಳ್ಳುವ ಅವಕಾಶಗಳು ಕಡಿಮೆ. ನಮ್ಮಿಬ್ಬರ ಕೈಗಳಲ್ಲೂ ಹಲವಾರು ಚಿತ್ರಗಳಿವೆ ಎಂದು ಅವರು ಹೇಳಿದ್ದಾರೆ.
ತಮ್ಮ ಪ್ರತಿಯೊಂದು ಚಿತ್ರದಲ್ಲೂ ತಾನು ಅತ್ಯುತ್ತಮ ನಿರ್ವಹಣೆ ನೀಡುತ್ತೇನೆಂದು ಹೇಳಿದ ಮೋಹನ್ ಲಾಲ್, ಅದೇ ಸಮಯ ಪ್ರತೀ ಚಿತ್ರ ಬಾಕ್ಸಾಫೀಸಿನಲ್ಲಿ ಶತಕ ಆಚರಿಸುವುದೆಂದು ಗ್ಯಾರಂಟಿ ನೀಡಲು ಸಾಧ್ಯವಿಲ್ಲವೆಂದರು.





